Advertisement

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

01:29 PM May 24, 2024 | Team Udayavani |

ಮೈಸೂರು: ಲೋಕಸಭೆ ಚುನಾವಣೆ ಮುಗಿದ ಕೂಡಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಚುನಾವಣೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮೊದಲು ಕ್ಷೇತ್ರ ಪುನರ್ ವಿಂಗಡಣೆ ಆಗುತ್ತದೆ. ನಂತರ ಮೀಸಲಾತಿ ಪ್ರಕಟಿಸುತ್ತೇವೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ, ಎರಡು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆದರೆ ಈವರಗೆ ಯಾವುದೇ ಉತ್ತರ ಬಂದಿಲ್ಲ. ಪ್ರಧಾನಿ ಕಚೇರಿಗೆ ಪತ್ರ ಬರೆದರೆ ಉತ್ತರ ಬಂದೇ ಬರುತ್ತದೆ ಎನ್ನುವ ಅಭಿಪ್ರಾಯ ನಿಮ್ಮ ತಪ್ಪು ತಿಳುವಳಿಕೆ. ಹಾಗಂತ ಪ್ರಧಾನಿ ಮೋದಿ ಸೆಲೆಕ್ಟಿವ್ ಆಗಿದ್ದಾರೆಂದು ನಾನು‌ ಹೇಳಲ್ಲ. ಒಬ್ಬ ಸಿಎಂ ಪ್ರಧಾನಿಗೆ ಪತ್ರ ಬರೆದರೆ ಉತ್ತರ ಕೊಡಬೇಕಿತ್ತು. ಆದರೆ ಅವರು ಉತ್ತರ ಕೊಡುವ ಕೆಲಸ ಮಾಡಿಲ್ಲ. ಯಾಕೆ‌ ಕೊಟ್ಟಿಲ್ಲ ಎಂಬುದನ್ನು ನೀವು ಅವರನ್ನೇ ಕೇಳಿ. ಬಿಜೆಪಿಯ ಪ್ರಹ್ಲಾದ್ ಜೋಷಿಯನ್ನು ಕೇಳಿ ಎಂದು ಸಿಎಂ ಸಿದ್ದರಾಮಯ್ಯ‌ ಹೇಳಿದರು.

ಕುಟುಂಬಕ್ಕೆ ಎಲ್ಲಾ ಗೊತ್ತಿದೆ: ಡಿ.ಕೆ.ಶಿವಕುಮಾರ್ ವಿಚಾರಣೆಗೆ ಒಳಪಡಿಸಿ ಎಂಬ ಮಾಜಿ ಸಿಎಂ ಎಚ್.ಡಿ.ಕೆ‌. ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ ಡಿಕೆಶಿ ಪರ ಬ್ಯಾಟ್ ಬೀಸಿದ ಅವರು, ಪ್ರಜ್ವಲ್ ಮೇಲೆ ರೇಪ್, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರವನ್ನು ದಿಕ್ಕು ತಪ್ಪಿಸಲು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಹೆಸರು ಹೇಳುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಅಪರಾಧಿ ಅಲ್ಲ ಆರೋಪಿ ಅಂತ ಹೇಳಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ. ನಾನು ಆರೋಪಿ ಅಂತಲೇ ಹೇಳುತ್ತಿರುವುದು ಎಂಧರು.

ದೇವೇಗೌಡರ ಕುಟುಂಬದಿಂದ ಪ್ರಜ್ವಲ್ ಹೊರಹಾಕುವ ವಿಚಾರ‌ಕ್ಕೆ ಮಾತನಾಡಿ,  ದೇವೇಗೌಡರು ಹಾಗೂ ಅವರ‌ ಮನೆಯವರಿಗೆ ಗೊತ್ತಿಲ್ಲದೇ ಮನೆಯಿಂದ ಹೋಗಿದ್ದಾನಾ? ಪ್ರಜ್ವಲ್ ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ಲವಾ? ಪ್ರಜ್ವಲ್ ಪರ ವಿಚಾರಕ್ಕೆ ಹೋದಾಗ ನನ್ನ ಮಗ ಎಂದಿದ್ದರು. ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೆ ಅಲ್ವ? ಪ್ರಜ್ವಲ್ ವಿಚಾರ ಅವರ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ ಎಂದರು.

Advertisement

ಯತೀಂದ್ರಗೆ ಪರಿಷತ್ ಟಿಕೆಟ್ ವಿಚಾರಕ್ಕೆ ಮಾತನಾಡಿ, ನಾನು ವಿಧಾನಸಭೆಗೆ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ. ಹೈಕಮಾಂಡ್ ಕೋಲಾರ ಬೇಡ ವರುಣದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದರು, ಆಗ ಯತೀಂದ್ರ ಅಲ್ಲಿ ಶಾಸಕರಾಗಿದ್ದರು. ಸೀಟು ಬಿಟ್ಟುಕೊಡಿ ಮುಂದೆ ನಿಮ್ಮನ್ನ ಎಂಎಲ್ ಸಿ ಮಾಡುತ್ತೇವೆಂದು ಹೈಕಮಾಂಡ್ ಯತೀಂದ್ರಗೆ ಹೇಳಿದ್ದರು. ಈಗ ಅವರು ಏನು ಮಾಡುತ್ತಾರೆಂದು ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next