Advertisement

ಜಿಪಂ ಅಧ್ಯಕ್ಷ ಯಡಿಯಾಪುರ ಅಧಿಕಾರ ಸ್ವೀಕಾರ

01:00 PM Jul 19, 2020 | Suhan S |

ಯಾದಗಿರಿ: ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷ ಬಸಣ್ಣಗೌಡ ಪಾಟೀಲ ಯಡಿಯಾಪುರ ಶನಿವಾರ ತಮ್ಮ ಕಚೇರಿಯಲ್ಲಿ ಸರಳವಾಗಿ ಅಧಿಕಾರ ಸ್ವೀಕರಿಸಿದರು,

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಯತ್ನಿಸುವೆ ಎಂದರು. ಜು.21ರಿಂದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುವುದರಿಂದ ಆ ಭಾಗದಲ್ಲಿ ಭತ್ತ ನಾಟಿ ಕಾರ್ಯ ಚುರುಕುಗೊಳ್ಳುತ್ತದೆ. ಭತ್ತ ನಾಟಿ ಮಾಡಲು ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ಸಾವಿರಾರು ಕೂಲಿ ಕಾರ್ಮಿಕರು ಜಿಲ್ಲೆಗೆ ಆಗಮಿಸುತ್ತಾರೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್‌ನಿಂದ ಜನರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಲಾಕ್‌ಡೌನ್‌ ಮುಗಿದ ಬಳಿಕ ಕೃಷಿ, ಆರೋಗ್ಯ ಇಲಾಖೆ ಅ ಧಿಕಾರಿಗಳ ಸಭೆ ಕರೆದು ಚರ್ಚಿಸುವೆ ಎಂದರು.

ಉಪಾಧ್ಯಕ್ಷೆ ಗಿರಿಜಮ್ಮ ಎಸ್‌. ಪಾಟೀಲ ರೊಟ್ನಡಗಿ, ಸದಸ್ಯ ಕಿಶನ್‌ ರಾಠೊಡ, ಅಮರದೀಪ ನಾಯಕ, ಎನ್‌ .ಡಿ ನಾಯಕ, ಭೀಮಣ್ಣಗೌಡ ಕ್ಯಾತನಾಳ, ದೇವಿಂದ್ರಪ್ಪ ಮುನಮುಟಗಿ, ರಾಮರಡ್ಡಿ ತಂಗಡಗಿ, ರಾಚನಗೌಡ ಮುದ್ನಾಳ, ಶಾಂತಿಲಾಲ್‌ ರಾಠೊಡ, ಸುರೇಶ ರಾಠೊಡ, ಮಾಣಿಕರೆಡ್ಡಿ ಕುರಕುಂದಿ, ರಮೇಶ ದೊಡ್ಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next