Advertisement

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

06:11 PM Mar 10, 2021 | Team Udayavani |

ಹಾವೇರಿ: ಬೇಸಿಗೆ ಆರಂಭಗೊಂಡಿದ್ದು, ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನುಈಗಿನಿಂದಲೇ ಗುರುತು ಮಾಡಿಕೊಳ್ಳಬೇಕು. ನೀರಿನ ಸಮಸ್ಯೆ ಇದ್ದಲ್ಲಿ ಪರ್ಯಾಯ ವ್ಯವಸ್ಥೆಕೈಗೊಂಡು ನೀರಿನ ಸಮಸ್ಯೆ ಎದುರಾಗದಂತೆ ಪೂರ್ವಸಿದ್ಧತೆ ಕೈಗೊಳ್ಳಬೇಕೆಂದು ಅಧಿ ಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಪಂ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀರಿನ ಮೂಲಗಳಿಲ್ಲದ ಹಳ್ಳಿಗಳಲ್ಲಿಅನಿವಾರ್ಯತೆ ಉಂಟಾದಲ್ಲಿ ಮಾತ್ರ ಟ್ಯಾಂಕರ್‌ಬಳಕೆಗೆ ಕ್ರಮ ಕೈಗೊಳ್ಳಬೇಕು. ಕೊಳವೆಬಾವಿ ಕೊರೆಯಲು ಸರ್ಕಾರದ ಅನುಮತಿ ಇಲ್ಲ.ಈ ಹಿನ್ನೆಲೆ ಪರ್ಯಾಯ ವ್ಯವಸ್ಥೆ ಕುರಿತಂತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಯಾವ ಹಳ್ಳಿಗೂಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು.

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ನೀವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಪಂ ಸಿಇಒ ಮಹಮ್ಮದ್‌ ರೋಷನ್‌ ಮಾತನಾಡಿ, ಸಧ್ಯ ಜಿಲ್ಲೆಯಲ್ಲಿ ನೀರಿನ ಅಭಾವವಿಲ್ಲ. ಕಳೆದಮೂರು ವರ್ಷಗಳ ಪರಿಸ್ಥಿತಿಯನ್ನು ಅವಲೋಕಿಸಿಬಹುಗ್ರಾಮ ಕುಡಿಯುವ ನೀರಿನ ಯೋಜನೆ,ಜಲಜೀವನ ಮಿಷನ್‌ ಯೋಜನೆ ಒಳಪಡುವ ಗ್ರಾಮಗಳು ಹಾಗೂ ಟ್ಯಾಂಕರ್‌ ಮೂಲಕ ನೀರುಪೂರೈಕೆ ಗ್ರಾಮಗಳ ನಕ್ಷೆ ತಯಾರಿಸಲಾಗಿದೆ.ಒಂದು ವಾರದೊಳಗೆ ಟಾಸ್ಕ್ಫೋರ್ಸ್‌ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ತಕ್ಷಣಕ್ರಿಯಾ ಯೋಜನೆ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೃಷಿ ಇಲಾಖೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಂದರ್ಭದಲ್ಲಿ ಸ್ಥಳೀಯ ಜಿಪಂ ಸದಸ್ಯರ ಗಮನಕ್ಕೆ ತರಬೇಕು. ರೈತ ಫಲಾನುಭವಿಗಳಿಗೆತಾಡಪಲ್‌ ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪುವಂತೆ ಕೃಷಿಜಂಟಿ ನಿರ್ದೇಶಕರು ಕೆಳಹಂತದ ಅಧಿಕಾರಿಗಳಿಗೆಸೂಕ್ತ ನಿರ್ದೇಶನ ನೀಡಬೇಕು. ಯಾವುದೇಯೋಜನೆಗಳು ಒಬ್ಬನೇ ಫಲಾನುಭವಿಗಳಿಗೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು.

ಈ ವರ್ಷ ಇಲಾಖಾವಾರು ನಿಗದಿಯಾಗಿರುವ ಅನುದಾನ ಬಳಕೆಗೆ ಸಾಧ್ಯವಾಗದೇಹಿಂತಿರುಗಿಸಲಾಗಿದೆ ಎಂಬ ವಿಷಯ ಬರಬಾರದು. ಬಿಡುಗಡೆಯಾದ ಅನುದಾನ ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಶಾಲಾ-ಕಾಲೇಜುಗಳು ಪುರ್ನಾರಂಭಗೊಂಡಿವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗ ತಮಾರ್ಗದಲ್ಲಿ ಬಸ್‌ಗಳನ್ನು ಪುನಃ ಆರಂಭಿಸಬೇಕು. ಕೋವಿಡ್ ಸಂದರ್ಭದಲ್ಲಿ ಬಸ್‌ ಓಡಾಟನಿಲ್ಲಿಸಲಾಗಿತ್ತು. ಈಗಲೂ ಕೆಲ ಮಾರ್ಗದಲ್ಲಿಬಸ್‌ ಆರಂಭಿಸಿಲ್ಲ ಎಂಬ ಸದಸ್ಯರ ಆಕ್ಷೇಪದಹಿನ್ನೆಲೆಯಲ್ಲಿ ತಕ್ಷಣ ಎಲ್ಲ ಮಾರ್ಗಗಳಲ್ಲೂ ಬಸ್‌ಸಂಚಾರ ಆರಂಭಿಸಲು ವಾಯವ್ಯ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳನಿರ್ಮಾಣ ಹಾಗೂ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗದ ಕುರಿತಂತೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲೆಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಸಭೆ ತಿಳಿಸಿದಅಭಿಯಂತರರ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಸಭೆಯಲ್ಲಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಟಾಕನಗೌಡ ಪಾಟೀಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪೂರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಹಾರ ವಿತರಣೆಯಲ್ಲಿ ತಾರತಮ್ಯ :

ಹಾವೇರಿ ತಾಲೂಕಿನ ಕೊರಡೂರು ಹಾಗೂ ಕಿತ್ತೂರು ಗ್ರಾಮದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಲಾಗಿದೆ. ಅಲ್ಲದೇ, ಪಂಚಾಯಿತಿಯಲ್ಲಿನ ಠರಾವು ಪುಸ್ತಕ ಸಹ ಕಾಣೆಯಾಗಿದೆ. ಈ ಬಗ್ಗೆ ಕೇಳಿದರೆ ಯಾರೊಬ್ಬರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಠರಾವು ಪುಸ್ತಕ ಕಾಣೆಯಾಗಿರುವುದಕ್ಕೆ ಯಾರು ಹೊಣೆ ಎಂದು ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ ಪ್ರಶ್ನಿಸಿದರು. ಆಗ ತಾಪಂ ಇಒ ಬಸವರಾಜಪ್ಪ ಮಾತನಾಡಿ, ಠರಾವು ಪುಸ್ತಕಕಾಣೆಯಾಗಿರುವ ಕುರಿತು ಗುತ್ತಲ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದರು. ಆಗಜಿಪಂ ಸಿಇಒ ಮಹಮದ್‌ ರೋಷನ್‌ ಮಧ್ಯ ಪ್ರವೇಶಿಸಿ, ಠರಾವು ಪುಸ್ತಕ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿ 24 ಗಂಟೆಯೊಳಗೆ ಸಮಗ್ರ ವರದಿ ನೀಡಬೇಕು. ವರದಿ ಆಧರಿಸಿ ಇಲಾಖೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next