Advertisement
ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಶಿವಾನಂದ ಹೆಗಡೆ, ಕೋವಿಡ್ -19 ಎರಡನೇ ಅಲೆಯ ತಡೆಗಾಗಿ ಯಾವೆಲ್ಲ ಕ್ರಮಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರವೇ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರ, ಕೇರಳಾ ಸೇರಿದಂತೆಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರುಕೋವಿಡ್-19 ಪರೀಕ್ಷೆ ಮಾಡಿಸಿದ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕಾಗಿದೆ. ಅಲ್ಲದೇ ಮುಖ್ಯ ಮಂತ್ರಿಗಳು ಈ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂಸಿಇಒ ಜೊತೆ ವಿಡಿಯೋ ಸಂವಾದ ನಡೆಸಿ ಹೆಚ್ಚಿನಕಾಳಜಿವಹಿಸಿ ಕರ್ತವ್ಯ ನಿರ್ವಹಸಲು ತಿಳಿಸಿದ್ದಾರೆ ಎಂದರು.
Related Articles
Advertisement
ಮಾಣಿಕಟ್ಟಾದಿಂದ ಕಾಗಾಲವರೆಗೆ ವಿಶ್ವ ಬ್ಯಾಂಕ್ ನೆರವಿನಿಂದ ಪ್ರಕೃತಿ ವಿಕೋಪ ಯೋಜನೆಯಡಿ32 ಕೋಟಿ ವೆಚ್ಚದ ಖಾರಲ್ಯಾಂಡ್ ಮತ್ತು ಬ್ರಿಡ್ಜ್ಕಾಮಗಾರಿ ನಡೆಯುತ್ತಿದೆ ಹಾಗೂ ಕಾಮಗಾರಿಯಲ್ಲಿಇರುವ ಲೋಪದೋಷಗಳ ಕುರಿತ ಮನವಿ ಪತ್ರವನ್ನು ಸದಸ್ಯ ರತ್ನಾಕರ ನಾಯ್ಕ ನೀಡಿದರು.
ಜಿಲ್ಲೆಯ ದೊಡ್ನಳ್ಳಿ ಭಾಗದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಆಗುತ್ತಿರುವುದಲ್ಲದೇ, ಕೃತ್ಯ ಎಸಗಿದವರನ್ನು ಬಂಧಿಸಿದ ಮರುದಿನವೇ ಹೊರಬಂದು, ಮತ್ತೆ ಸಾರಾಯಿ ಮಾರಾಟ ಮಾಡುತ್ತಾರೆ. ಇದು ಗ್ರಾಮಸ್ಥರು ಮತ್ತು ಮಕ್ಕಳಲ್ಲಿಪರಿಣಾಮ ಬೀರುತ್ತಿದೆ. ಶಿರಸಿ ವಿಭಾಗದ ಕಸ ವಿಲೇವಾರಿ ಪ್ರದೇಶದಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ನೂರಾರು ಹಂದಿಗಳನ್ನ ರಸ್ತೆಗೆ ಬಿಟ್ಟುಸಾಕಲಾಗುತ್ತಿದೆ. ಕೊಳಚೆ ಪ್ರದೇಶ ಆಗಿರುವುದರಿಂದ ಹಾಗೂ ಅಂಗನವಾಡಿಗಳಿರುವುದರಿಂದ ಮಕ್ಕಳಿಗೆರೋಗಗಳು ಬರಬಹುದು ಎಂದು ಸದಸ್ಯರಾದ ಉಷಾ ಹೆಗಡೆ ಹೇಳಿದರು.
ಇದಕ್ಕೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡಮನಿ ಅವರು ಅಬಕಾರಿ ಇಲಾಖೆಗೆ ಕ್ರಮ ಜರುಗಿಸಲು ಸೂಚಿಸಿದರು. ಅಲ್ಲದೇ ಸರ್ಕಾರದಿಂದ ಕುರಿ ಹಾಗೂ ಹಂದಿಸಾಕಾಣಿಕೆಗೆ ಪರವಾನಗಿ ನೀಡುವಾಗ ಸ್ಥಳವಕಾಶಪರಿಶೀಲಿಸಲಾಗುತ್ತದೆ. ಆದರೆ ಈ ಪ್ರಕರಣಅನಧಿಕೃತ ಆಗಿರುವುದರಿಂದ ಪಶು ಇಲಾಖೆ ಹಾಗೂಅರೋಗ್ಯ ಇಲಾಖೆಯಿಂದ ಪರಿಶೀಲಿಸಿ ಕ್ರಮದ ಕೈಗೊಳ್ಳಲಾಗುವುದು ಎಂದರು.
ಹಳದಿಪುರ ಜಿಪಂ ವ್ಯಾಪ್ತಿಯಲ್ಲಿ ಬರುವ ಪಿಡಬ್ಲ್ಯು ಡಿ ರಸ್ತೆಗಳ ನಿರ್ವಹಣೆ ಕೆಲಸ ನಡೆಯುತ್ತಿಲ್ಲ. ಮೇಲ್ನೋಟಕ್ಕೆ ಕೆಲಸ ನಡೆದಿದೆ ಹಾಗೂ ರಸ್ತೆಗಳ ಪಕ್ಕದಲ್ಲಿ ಅಂಗಡಿಗಳು ತಲೆ ಎತ್ತಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯರಾದ ಶಿವಾನಂದ ಹೆಗಡೆ ತಿಳಿಸಿದರು. ಪಿಡಬ್ಲ್ಯುಡಿ ಅಧಿಕಾರಿ ಮಾತನಾಡಿ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ಜಂಗಲ್ ಕಟಿಂಗ್, ಕಿಮೀ ಕಲ್ಲುಗಳ ಪೇಂಟಿಂಗ್ ಮತ್ತು ಪ್ಯಾಚ್ ವರ್ಕ್ ಕಾಮಗಾರಿ ಮುಗಿದಿದ್ದು ಸೈಡ್ ಶೋಲ್ಡರ್ ಕೆಲಸ ಮಾತ್ರ ಬಾಕಿ ಇದೆ, ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ, ಸಾಮಾಜಿಕ ನ್ಯಾಯ, ಕೃಷಿ ಮತ್ತು ಕೈಗಾರಿಕೆ, ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳ ನಡವಳಿಕೆಗಳಿಗೆಅನುಮೋದನೆ ನೀಡಲಾಯಿತು. ನಂತರ ಜ.22 ರಂದು ನಡೆದ ಜಿಪಂ ಸಾಮಾನ್ಯ ಸಭೆ ನಡವಳಿಗಳ ಮೇಲಿನ ಪಾಲನಾ ವರದಿ ಕುರಿತು ಚರ್ಚಿಸಲಾಯಿತು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಕೃಷಿ ಮತ್ತು ಕೈಗಾರಿಕೆಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಾಯ್ಕ ಸೇರಿದಂತೆಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.