Advertisement
ಜಿಲ್ಲಾ ಉಸ್ತುವಾರಿ ಸಚಿವ ಭೈರತಿಬಸವರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, “ಉದಯವಾಣಿ’ ಪತ್ರಿಕೆಯಲ್ಲಿಪ್ರಕಟವಾದ “ಫ್ಲೊರೈಡ್ ನೀರಿಗೆ ನಲುಗಿದ ಜನ’ ವಿಶೇಷ ವರದಿಯ ಪ್ರತಿ ಪ್ರದರ್ಶಿಸಿ, ಈ ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
Related Articles
Advertisement
ಅಕ್ರಮ ಪಂಪ್‌ಸೆಟ್ ತೆಗೆಸಿ: ನದಿ ಹಾಗೂ ನದಿ ಕಾಲುವೆಗಳಿಗೆ ಹಾಕಿರುವ ಅಕ್ರಮ ಪಂಪ್‌ಸೆಟ್ ತೆರವುಗೊಳಿಸುವಂತೆ ಉತ್ಛ ನ್ಯಾಯಾಲಯ ಆದೇಶ ಹೊರಡಿಸಿರುವುದರಿಂದ ಕಟ್ಟುನಿಟ್ಟಾಗಿ ಎಲ್ಲ ಅಕ್ರಮ ಪಂಪ್ ಸೆಟ್‌ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ನ್ಯಾಯಾಲಯ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಸಚಿವ ಬಸವರಾಜ್ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನೀರಾವರಿ, ಲೋಕೋಪಯೋಗಿ, ಬೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಮಾಡಿ ತೆರವುಗೊಳಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಶಾಲಾ ಆರಂಭದೊಳಗೆ ಕೆಲಸ ಮುಗಿಸಿ: ಶಾಲೆಗಳು ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಶಾಲೆ ಪ್ರಾರಂಭವಾಗುವುದರೊಳಗೆ ಕಟ್ಟಡ ದುರಸ್ತಿ, ಶೌಚಾಲಯ ದುರಸ್ತಿ ಹಾಗೂ ನಿರ್ಮಾಣ ಸೇರಿದಂತೆ ಶಾಲೆಗಳ ಕೆಲಸ ಪೂರ್ಣಗೊಳಿಸಿಕೊಳ್ಳಬೇಕು. ಇನ್ನು ಶಾಲಾ ಶೌಚಾಲಯಕ್ಕಾಗಿ ಶಾಸಕರ ಅನುದಾನ ಪಡೆದು ದುರಸ್ತಿ ಇಲ್ಲವೇ ಹೊಸದಾಗಿ ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು.ಜಿಪಂನಿಂದ ಜಲಜೀವನ್ ಮಿಷನ್‌ಯೋಜನೆಯಡಿ ಶೌಚಾಲಯಗಳಿಗೆನಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.ಬೇರೆ ಅನುದಾನದಲ್ಲಿ ಟ್ಯಾಂಕ್ ವ್ಯವಸ್ಥೆಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಅನುದಾನ ಲ್ಯಾಪ್ಸ್ ಆದರೆ ಶಿಸ್ತುಕ್ರಮ: ಅಧಿಕಾರಿಗಳು ಸರಕಾರಕ್ಕೆ ಕೆಟ್ಟ ಹೆಸರು ತರುವಕೆಲಸ ಮಾಡಬಾರದು. ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮುಂದೆ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳು ಬರಲಿದ್ದು ಎಲ್ಲ ಜನನಾಯಕರು ಗ್ರಾಮಗಳಿಗೆಬರುತ್ತಾರೆ. ಇಂಥ ಸಂದರ್ಭದಲ್ಲಿ ಜನರು ಮೂಲಸೌಕರ್ಯಕ್ಕೆ ಸಂಬಂಧಿಸಿ ದೂರು ನೀಡುವಂತಾಗಬಾರದು. ಉನ್ನತ ಅಧಿಕಾರಿಗಳು ಆಗಾಗಸ್ಥಳ ಪರಿಶೀಲನೆಮಾಡಿ ಪ್ರಗತಿ ಪರಿಶೀಲಿಸಬೇಕು. ಯಾವ ಇಲಾಖೆಯ ಒಂದು ಪೈಸೆಯೂ ಲ್ಯಾಪ್ಸ್‌ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಅನುದಾನ ಲ್ಯಾಪ್ಸ್ ಆದರೆ, ಸಂಬಂಧಿಸಿದ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ್ ಕಟ್ಟುನಿಟ್ಟಿನ ಆದೇಶ ನೀಡಿದರು.
ಶಾಸಕರಾದ ಎಸ್.ಎ. ರವೀದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ನಿಂಗಣ್ಣ, ಎನ್. ರವಿಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡರು. ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಪದ್ಮಾ ಬಸವಂತಪ್ಪ ಸಭೆಯಲ್ಲಿದ್ದರು.
ಅಧಿಕಾರಿಗಳಿಗೆ ತರಾಟೆ… : ಕಳೆದ ಸಾಲಿನಲ್ಲಿ ಬಿಡುಗಡೆಯಾದ ನೆರೆ ಪರಿಹಾರ ಅನುದಾನದಲ್ಲಿ ಯಾವೆಲ್ಲ ಕೆಲಸ ಮಾಡಿದ್ದೀರಿ ಹಾಗೂ ಎಷ್ಟು ಅನುದಾನ ಖರ್ಚಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಲುತಡವರಿಸಿದ ಅಧಿಕಾರಿಗಳನ್ನು ಸಚಿವ ಬಿ. ಬಸವರಾಜ ತೀವ್ರ ತರಾಟೆ ತೆಗೆದುಕೊಂಡರು. ಬಳಿಕ ಜಿಲ್ಲಾಧಿಕಾರಿಗಳು ನೆರೆ ಪರಿಹಾರ ಅನುದಾನಕ್ಕೆ ಸಂಬಂಧಿಸಿ ಎರಡೂ¾ರು ದಿನಗಳಲ್ಲಿ ಎಲ್ಲ ವಿಭಾಗದ ಅಧಿಕಾರಿಗಳ ಸಭೆ ನಡೆಸಿ, ವರದಿ ಸಲ್ಲಿಸುವುದಾಗಿ ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.
ಸಚಿವರನ್ನು ಕೆರಳಿಸಿದ ಧೂಳು : ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಅವರು ಜಿಪಂ ಪ್ರಗತಿ ಪರಿಶೀಲನಾ ಸಭೆಗಾಗಿ ಸಭಾಂಗಣಕ್ಕೆ ಆಗಮಿಸಿ, ಆಸೀನರಾಗುತ್ತಿದ್ದಂತೆ ಸಭಾಭವನದ ಕಿಟಕಿಗಳಿಗೆ ಮೆತ್ತಿಕೊಂಡಿದ್ದ ಧೂಳು ಕಣ್ಣಿಗೆ ರಾಚಿತು.ಆಗ ಪಕ್ಕದಲ್ಲಿಯೇ ಇದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಧೂಳು ತೋರಿಸಿ, ಕನಿಷ್ಠ ಪಕ್ಷ ಸಭೆ ಇದ್ದಾಗಲಾದರೂ ಸಭಾಂಗಣದ ಧೂಳು ಸ್ವತ್ಛಗೊಳಿಸಬಾರದೇ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೂಡಲೇ ಅಧಿಕಾರಿಗಳನ್ನು ಕರೆಸಿ ಧೂಳು ತೋರಿಸಿ, ಸ್ವಚ್ಛಗೊಳಿಸಲು ಆದೇಶಿಸಿದರು.
ಅಧಿಕಾರಿ ಅಮಾನತಿಗೆ ಆದೇಶ… : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರತಿಯೊಂದು ಜಿಪಂ ಸಭೆಗೂ ಗೈರಾಗುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಸಭೆಯಲ್ಲಿ ಉಪಸ್ಥಿತ ಕಿರಿಯ ಅಧಿಕಾರಿ ಮಾತನಾಡಿ, ಜಿಲ್ಲಾ ವ್ಯವಸ್ಥಾಪಕರು ಬಳ್ಳಾರಿ ಜಿಲ್ಲೆಯ ಕಾರ್ಯಭಾರದಲ್ಲಿದ್ದಾರೆ. ಹಾಗಾಗಿ ಬಂದಿಲ್ಲ ಎಂದು ಸಭೆ ತಿಳಿಸಿದರು. ಆಗ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗಲೂ ಅಧಿಕಾರಿ ಸಭೆಗೆ ಬಾರದೇ ಇರುವುದು ಸರಿಯಲ್ಲ. ಈಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಯಾರ ಗಮನಕ್ಕೂ ತಾರದೆ ಗೈರಾಗುವುದು ಅಶಿಸ್ತು. ಅವರನ್ನು ಕೂಡಲೇ ಅಮಾನತುಗೊಳಿಸಲಾಗುವುದು. ಜಿಲ್ಲಾಧಿಕಾರಿಯವರು ಈ ಕುರಿತು ಶಿಫಾರಸು ಕಳಿಸಬೇಕು ಎಂದು ಖಡಕ್ ಆದೇಶ ನೀಡಿದರು.