Advertisement
ಸದಸ್ಯ ಸುರೇಂದ್ರ ನಾಯ್ಕ ಮಾತನಾಡಿ, ಮೆಕ್ಕೆಜೋಳ ಬೆಳೆ ಕಟಾವಿಗೆ ಬಂದಿದೆ. ಈವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆಧ್ವನಿಗೂಡಿಸಿದ ಸದಸ್ಯರಾದ ವಿಶ್ವನಾಥ್, ಕೆ.ಎಸ್. ಬಸವಂತಪ್ಪ, ಕೆ.ಎಚ್. ಓಬಳಪ್ಪ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸದಸ್ಯರೇ ರೈತರ ಪರವಾಗಿ ಪ್ರಶ್ನೆ ಕೇಳಿರುವುದು ಒಳ್ಳೆಯ ವಿಚಾರ. ಆದರೆ ಮುಖ್ಯಮಂತ್ರಿಯವರು ಮೆಕ್ಕೆಜೋಳ ಆಹಾರ ವಸ್ತುವಲ್ಲ ಎಂದು ಕೇಂದ್ರ ಹೇಳಿದ್ದು ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮಾನವೀಯತೆ ಆಧಾರದಲ್ಲಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಆಧರಿಸಿ ನಡೆಯುವ ಕೈಗಾರಿಕೆಯವರಾದರೂ ಕೇಂದ್ರ ಸರ್ಕಾರ ಘೋಷಿಸಿರುವ 1800 ರೂ. ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವಂತಾಗಬೇಕು. ಇದರಿಂದ ಕೆಲವು ರೈತರಿಗಾದರೂ ಅನುಕೂಲವಾಗುತ್ತದೆ. ಈ ಬಗ್ಗೆ ಉದ್ಯಮಿಗಳ ಸಭೆ ಕರೆದ ಮನವೊಲಿಸಬೇಕು ಎಂದು ಸಲಹೆ ನೀಡಿದರು.
Related Articles
Advertisement
ವಸತಿರಹಿತರ ಪಟ್ಟಿಯಲ್ಲೇ ಆಯ್ಕೆಯಾಗಲಿ: ಸದಸ್ಯ ವಿಶ್ವನಾಥ್ ಮಾತನಾಡಿ, ಪ್ರತಿ ಗ್ರಾಪಂಗೆ 20 ಆಶ್ರಯ ಮನೆ ಮಂಜೂರಿ ಮಾಡಲಾಗುತ್ತಿದ್ದು ಈಗಾಗಲೇ ಸಿದ್ಧಪಡಿಸಿರುವ ವಸತಿರಹಿತರ ಪಟ್ಟಿಯಲ್ಲಿರುವವರನ್ನೇ ಆಯ್ಕೆ ಮಾಡಬೇಕು. ಆ ಪಟ್ಟಿ ಬಿಟ್ಟು ಮಾಡುವುದಾದರೆ ಎಲ್ಲ ಹಂತದ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹೊಸದಾಗಿ ಗ್ರಾಮಸಭೆ ಮಾಡಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ವಸತಿರಹಿತರ ಪಟ್ಟಿಯಲ್ಲಿಯೇ ಮನೆಯ ಅವಶ್ಯಕತೆ ಹಾಗೂ ಮನೆ ಕಟ್ಟಿಸಿಕೊಳ್ಳುವ ಆಸಕ್ತಿ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸದಸ್ಯ ಕೆ.ಎಚ್. ಓಬಳಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆಹಾರ ಸರಬರಾಜಿಗೆ ಸಂಬಂಧಿಸಿದ ಟೆಂಡರ್ ನೀಡುವಲ್ಲಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಭೆ ತೀರ್ಮಾನಿಸಿತು. ಜಿಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಫಕೀRರಪ್ಪ, ಲೋಕೇಶ್ ವೇದಿಕೆಯಲ್ಲಿದ್ದರು.