Advertisement
ಬುಧವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯವ್ಯಯ ಮಂಡಿಸಿ ಮಾತನಾಡಿ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 130.74 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಶೇ.16.82ರಷ್ಟು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. 2018-19ನೇ ಸಾಲಿನಲ್ಲಿ 777.28 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಭಾಷಣದಲ್ಲಿ ತಿಳಿಸಿದರು.
Related Articles
Advertisement
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2018-20ನೇ ಸಾಲಿನಲ್ಲಿ 1.01 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಈ ಸಾಲಿನಲ್ಲಿ 84.59 ಲಕ್ಷ ರೂ. ಮಾತ್ರ ನೀಡಿದೆ.
ರಸ್ತೆಗಳ ನಿರ್ವಹಣೆಗೆ ಅನುದಾನ: ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 7.75 ಕೋಟಿ ರೂ. ನೀಡಿದೆ. ಜಿಲ್ಲೆಯಲ್ಲಿ 8573 ಕಿ.ಮೀ. ಉದ್ದ ರಸ್ತೆ ಇದ್ದು, ಇದರಲ್ಲಿ 1746 ಕಿ.ಮೀ. ಡಾಂಬರು, 1591 ಕಿ.ಮೀ. ಜಲ್ಲಿ ರಸ್ತೆ ಉಳಿದ 5234 ಕಿ.ಮೀ. ಗ್ರಾವೆಲ್ ರಸ್ತೆ ಇದೆ. ಈ ರಸ್ತೆಗಳ ನಿರ್ವಹಣೆಗೆ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು.
ಕೆರೆಗಳ ನಿರ್ವಹಣೆಗೆ 1.24 ಕೋಟಿ ರೂ.: ಸಣ್ಣ ನೀರಾವರಿ ಕೆರೆಗಳ ನಿರ್ವಹಣೆ ಮಾಡಲು ಸರ್ಕಾರದಿಂದ 1.24 ಕೋಟಿ ರೂ. ಅನುದಾನ ಒದಗಿಸಿದೆ. 2018-19ನೇ ಸಾಲಿನಲ್ಲಿ ಸಣ್ಣ ನೀರಾವರಿ ಸಮೀಕ್ಷಾ ಕಾರ್ಯ, ಹೊಸ ಸರಬರಾಜು ಯೋಜನೆಯಡಿ 5.72 ಲಕ್ಷ ರೂ. ಹಾಗೂ 4.58 ಲಕ್ಷ ರೂ. ಅನುದಾನ ಒದಗಿಸಿದ್ದು, ಈ ಅನುದಾನದಲ್ಲಿ ಸಣ್ಣಕೆರೆಗಳ ಸರಹದ್ದನ್ನು ಗುರುತಿಸುವ ಕಾರ್ಯವನ್ನು ತೆಗೆದುಕೊಳ್ಳಲಾಗಿದ್ದು, ಈ ಅನುದಾನ ಖರ್ಚಾಗದೆ ಹಾಗೇ ಉಳಿದಿತ್ತು..ಈ ಸಾಲಿನಲ್ಲಿ 6.12 ಲಕ್ಷ ರೂ 4.90 ಲಕ್ಷ ರೂ. ಅನುದಾನ ನೀಡಿದ್ದು, ಕೆರೆಗಳ ಸರಹದ್ದು ಗುರುತಿಸುವ ಕಾರ್ಯ ಕೈಗೊಳ್ಳಲಾಗುವುದು.
ಹೊಸ ಗೇಟ್‌ಗಳಿಗೆ ಅವಕಾಶ: 2018-19ನೇ ಸಾಲಿನಲ್ಲಿ ಸಣ್ಣ ಕೆರೆಗಳು, ಹೊಸ ಸರಬರಾಜಿಗೆ 10.30 ಲಕ್ಷ ರೂ. ಅನುದಾನ ನೀಡಿದ್ದು,ಅದು ಖರ್ಚಾಗಿರುವುದಿಲ್ಲ. ಈ ಸಾಲಿನಲ್ಲಿ 11.02 ಲಕ್ಷ ರೂ. ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಕೆಲವು ಕೆರೆಗಳಲ್ಲಿ ಸ್ಲೂಯೀಸ್ ಗೇಟ್ ಇಲ್ಲದೆ ನೀರು ಪೋಲಾಗುವ ಸಾಧ್ಯತೆಗಳಿದ್ದರೆ ಹೊಸ ಗೇಟ್‌ಗಳನ್ನು ಅಳವಡಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಈ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಕ್ರಿಯಾಯೋಜನೆ ರೂಪಿಸಲು 246.05 ಕೋಟಿ ರೂ.ಗಳ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 190.30 ಕೋಟಿ ರೂ. ಹಣನಿಗದಿಪಡಿಸಲಾಗಿದೆ.
ಡಿ.ದೇವರಾಜ ಅರಸು ಹುಟ್ಟುಹಬ್ಬ ಆಚರಣೆಗೆ 1 ಲಕ್ಷ ರೂ.: ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಪಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ 18.88 ಕೋಟಿ ರೂ., ತಾಪಂ ಕಾರ್ಯಕ್ರಮಗಳಿಗೆ 18.98 ಕೋಟಿ ರೂ. ಸೇರಿ 37.87 ಕೋಟಿ ರೂ. ಹಣ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 43.13 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವೇತನ ಬಾಬ್ತು 8.01 ಕೋಟಿ ರೂ. ಕಟ್ಟಡ ಬಾಡಿಗೆ 17.64 ಕೋಟಿ ರೂ., ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡಗಳ ದುರಸ್ತಿಗೆ 53.19 ಲಕ್ಷ ರೂ., ಇತರೆ ಹಿಂದುಳಿದ ವರ್ಗಗಳಿಗೆ ರಿಯಾಯಿತಿಗೆ 15.93 ಕೋಟಿ ರೂ., ಡಿ.ದೇವರಾಜ ಅರಸು ಹುಟ್ಟು ಹಬ್ಬ ಆಚರಣೆಗೆ 1 ಲಕ್ಷ ರೂ. ನೀಡಿದೆ.
ಬಜೆಟ್ ಸಭೆಯಲ್ಲಿ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ರವಿ, ಡಿ.ಕೆ.ಶಿವಪ್ರಕಾಶ್, ಮುಖ್ಯ ಯೋಜನಾಧಿಕಾರಿ ಧನುಷ್ ಇದ್ದರು.