Advertisement

ಶೂನ್ಯ ತ್ಯಾಜ್ಯ ಅಡುಗೆಗೆ ಶ್ಲಾಘನೆ

12:05 PM Jan 01, 2023 | Team Udayavani |

ಬೆಂಗಳೂರು: ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯಂತಹ ಹೊಸ ಸಾಧ್ಯತೆಗಳ ಬಗ್ಗೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಗವಿಪುರಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ-ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿ, ಅಡುಗೆ ಮನೆಯಲ್ಲಿ ಪ್ರತಿದಿನ ನಡೆಯುವಂತಹ ಅಡುಗೆ ತಯಾರಿಯ ಕೆಲಸಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆದುಕೊಂಡರು. ಪ್ರತಿದಿನ 70 ಸಾವಿರಕ್ಕೂ ಹೆಚ್ಚು ಊಟ ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆ ಯಲ್ಲಿ ಯಾವುದೇ ತ್ಯಾಜ್ಯ ಉತ್ಪತ್ತಿಯಾ ಗುವುದಿಲ್ಲ. ಹಾಗೆಯೇ, ಉಪಯೋಗಿ ಸಿದ ನೀರಿನ ಮರುಬಳಕೆಯನ್ನು ಮಾಡಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನ ಬಳಸದೇ ಅಡುಗೆ ಮಾಡುವುದು ಈ ಅಡುಗೆ ಮನೆಯ ಮತ್ತೂಂದು ವಿಶೇಷ ಎಂದು ತೇಜಸ್ವಿನಿ ಅನಂತ್‌ಕುಮಾರ್‌ ವಿವರಿಸಿದರು.

ಅಮಿತ್‌ ಶಾ ಅವರು ನಂತರ ಅನಂತ ಸೇವಾ ಉತ್ಸವದಲ್ಲಿ ಭಾಗವಹಿಸಿ ತೇಜಸ್‌ ಯುದ್ಧವಿಮಾನ ಅಭಿವೃದ್ಧಿಯ ಯಶೋಗಾಥೆ ಎನ್ನುವ ಪುಸ್ತಕದ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆಗೊಳಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್‌.ಅಶೋಕ್‌, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಗೃಹ ಸಚಿವ ಅರಗ ಜ್ಞಾನೇಂದ್ರ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿ ನಂದ ಕುಮಾರ್‌, ಪ್ರದೀಪ್‌ ಓಕ್‌, ಐಶ್ಚರ್ಯ ಅನಂತ ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ‌

Advertisement

Udayavani is now on Telegram. Click here to join our channel and stay updated with the latest news.

Next