Advertisement

ಕಾರವಾರದಲ್ಲಿ ಶೂನ್ಯ ನೆರಳಿನ ದಿನ

05:30 PM Apr 30, 2021 | Team Udayavani |

ಕಾರವಾರ : ಶುಕ್ರವಾರದಂದು ಕಾರವಾರದಲ್ಲಿಮಧ್ಯಾಹ್ನ 12.31ಕ್ಕೆ ಸೂರ್ಯನು ಶಿರೋಬಿಂದುವಿನ ಮೇಲೆ ಹಾದು ಹೋದ ಪರಿಣಾಮ ಸುಮಾರು 1 ನಿಮಿಷದ ಅವಧಿಗೆ ನೆರಳು ಕನಿಷ್ಟ ಪ್ರಮಾಣದಲ್ಲಿ ಗೋಚರಿಸಿದೆ. ಆದ್ದರಿಂದ ಇಂತಹ ದಿನವನ್ನು ಶೂನ್ಯ ನೆರಳಿನ ದಿನ ಎಂದುಕರೆಯುತ್ತಾರೆ.

Advertisement

ಈ ವಿದ್ಯಮಾನವನ್ನು ಉಪ-ಪ್ರಾದೇಶಿಕ ವಿಜ್ಞಾನಕೇಂದ್ರ, ಕಾರವಾರದಲ್ಲಿ ವೀಕ್ಷಿಸಲಾಯಿತು.ಆದರೆ ಲಾಕ್‌ಡೌನ್ ನಿಮಿತ್ತ ಶಾಲಾ ವಿದ್ಯಾರ್ಥಿಗಳು ಮನೆಗಳಲ್ಲೇ ಇದ್ದು ಇದನ್ನು ಪ್ರಯೋಗದ ಮೂಲಕ ಕಂಡುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು.

ಸಾಮಾನ್ಯರು ಊಹಿಸುವಂತೆ ಸೂರ್ಯ ಪ್ರತಿ ದಿನದ ಮಧ್ಯಾಹ್ನ ಶಿರೋಬಿಂದುವಿನ ಮೇಲೆ ಇರುವುದಿಲ್ಲ. ಯಾವುದೇ ಮಧ್ಯಾಹ್ನ ನೆರಳನ್ನು ನೋಡಿ ಇದನ್ನು ಪರಿಶೀಲಿಸಬಹುದು. ಸೂರ್ಯ ಗರಿಷ್ಠ ಎತ್ತರ ತಲುಪಿದಾಗ ಅದು ಶಿರೋಬಿಂದುವಿನ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ.

ಭೂಮಿಯ ಆವರ್ತನೆಯ ಅಕ್ಷ ಅದರ ಕಕ್ಷಾತಲಕ್ಕೆ 23.5 ಡಿಗ್ರಿ ಓರೆಯಾಗಿರುವುದೇ ಇದಕ್ಕೆ ಕಾರಣ. ಋತುಮಾನಗಳಿಗೂ ಇದೇ ಕಾರಣ. ಡಿಸೆಂಬರ್ 21 ರಂದು ದಕ್ಷಿಣದ ಗರಿಷ್ಠವನ್ನುತಲುಪಿ ಉತ್ತರಕ್ಕೆ ಹೊರಳುವುದರಿಂದ ಆ ಘಟನೆಗೆ ಉತ್ತರಾಯಣ ಎಂದು ಹೆಸರು. ಆ ಮಧ್ಯಾಹ್ನದ ನೆರಳು ಯಾವುದೇ ಮಧ್ಯಾಹ್ನದ ನೆರಳಿಗೆ ಹೋಲಿಸಿದರೆ ಗರಿಷ್ಠ. ಜೂನ್ 21 ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುವುದರಿಂದ ಆ ಘಟನೆಗೆ ದಕ್ಷಿಣಾಯನಎಂದು ಹೆಸರು. ಆ ಮಧ್ಯಾಹ್ನದ ನೆರಳು ಕನಿಷ್ಠ. ಸೂರ್ಯನ ಈ ಉತ್ತರ- ದಕ್ಷಿಣ ಚಲನೆಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದೇ ಕರೆಯುತ್ತಾರೆ.

ಕರ್ಕಾಟಕ ಹಾಗೂ ಮಕರ ಸಂಕ್ರಾಂತ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯ ಶಿರೀ ಬಿಂದುವಿನ ಮೇಲೆ ಹಾದು ಹೋಗುವ ಕಾರಣ ಆ ದಿನಗಳಲ್ಲಿ ಮಧ್ಯಾಹ್ನದ ನೆರಳು ಇಲ್ಲದಾಗುತ್ತದೆ. ಇದೇ ಶೂನ್ಯ ನೆರಳಿನ ದಿನದತತ್ವ ಎಂದು ವಿಜ್ಞಾನ ಕೇಂದ್ರದ ಸಹಾಯಕ ದೇಶಪಾಂಡೆ ವಿವರಿಸಿದರು‌.

Advertisement
Advertisement

Udayavani is now on Telegram. Click here to join our channel and stay updated with the latest news.

Next