ಗೌರಿಬಿದನೂರು: ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳಿಗೆಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದೆ. ಈಮೂಲಕ ಅವರ ಬದುಕಿಗೆ ಡಿಸಿಸಿ ಬ್ಯಾಂಕ್‌ಆಸರೆಯಾಗಲು ಬದ್ಧವಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.ತರಿಧಾಳು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ನಿಂದನಡೆದ ಸಾಲದ ಎಟಿಎಂ ಕಾರ್ಡ್ ವಿತರಣಾಕಾರ್ಯಕ್ರಮದಲ್ಲಿ ಮಾತನಾಡಿ, ಎÇÉೆಡೆ ಕೊರೊನಾವ್ಯಾಪಕವಾಗಿ ಹರಡುತ್ತಿದೆ.
ಅದನ್ನು ನಿಯಂತ್ರಣಮಾಡಲು ಕೈಜೋಡಿಸಬೇಕಾಗಿದೆ. ಕೋವಿಡ್‌ಸಂಕಷ್ಟದಲ್ಲಿ ಪ್ರತಿ ಮನೆಯಲ್ಲಿನ ಆದಾಯದಮೂಲಗಳು ಸ್ಥಗಿತಗೊಂಡ ಕಾರಣವಾಗಿ ಕುಟುಂಬನಿರ್ವಹಣೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸ್ವಾವಲಂಬಿಬದುಕು ಸಾಗಿಸುವ ಮಹಿಳೆಯರ ಕೈಯನ್ನುಬಲಪಡಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್‌ಸಂಘಗಳಿಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತಿದೆ.ಮಹಿಳೆಯರು ಅದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಕಷ್ಟಕ್ಕೆ ಡಿಸಿಸಿ ಬ್ಯಾಂಕ್ ಸ್ಪಂದನೆ: ಡಿಸಿಸಿ ಬ್ಯಾಂಕ್‌ನಿರ್ದೇಶಕ ಮರಳೂರು ಹನುಮಂತ ರೆಡ್ಡಿಮಾತನಾಡಿ, ಅವಿಭಜಿತ ಜಿಲ್ಲೆಗಳಲ್ಲಿ ಗ್ರಾಮೀಣಭಾಗದ ಮಹಿಳೆಯರ ಬದುಕಿಗೆ ಡಿಸಿಸಿ ಬ್ಯಾಂಕ್‌ಆಸರೆಯಾಗಿದೆ. ಸಕಾಲದಲ್ಲಿ ಅವರ ಸಂಕಷ್ಟಕ್ಕೆಸ್ಪಂದಿಸುವ ನಿಟ್ಟಿನಲ್ಲಿ ಸಾಲದ ಸೌಲಭ್ಯಕಲ್ಪಿಸಲಾಗುವುದು. ಮಹಿಳೆಯರು ತಮ್ಮಗ್ರಾಮಗಳಲ್ಲಿಯೇ ಹೈನುಗಾರಿಕೆ, ಕೋಳಿ ಸಾಕಾಣಿಕೆ,ಆಹಾರ ಪದಾರ್ಥಗಳ ಸಿದ್ಧಪಡಿಸುವಿಕೆ ಸೇರಿದಂತೆಇನ್ನಿತರ ಸ್ವ ಉದ್ಯೋಗಗಳನ್ನು ಕೈಗೊಳ್ಳಲುಸಾಧ್ಯವಾಗುತ್ತದೆ ಎಂದರು.
ಬಡ್ಡಿ ಇಲ್ಲದೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆನೀಡುವ ಸಾಲವನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳುವ ಮೂಲಕ ಮಹಿಳೆಯರುಸಬಲೀಕರಣಗೊಳ್ಳಬೇಕಾಗಿದೆ. ಪಡೆದ ಸಾಲವನ್ನುಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕಬ್ಯಾಂಕ್ ನ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದರು.ತರಿಧಾಳು ವ್ಯವಸಾಯ ಸೇವಾ ಸಹಕಾರಸಂಘದಲ್ಲಿನ ಒಟ್ಟು 8 ಗ್ರಾಮಗಳಲ್ಲಿನ 21 ಸ್ತ್ರೀ ಶಕ್ತಿಸ್ವ-ಸಹಾಯ ಗುಂಪುಗಳಿಗೆ 1,01,21000 ರೂ.ಗಳಸಾಲದ ಎಟಿಎಂ ಕಾರ್ಡ್ ಅನ್ನು ವಿತರಿಸಲಾಗಿದೆಎಂದು ಸೇವಾ ಸಹಕಾರ ಸಂಘದ ಕಾರ್ಯದರ್ಶಿರಾಮಕೃಷ್ಣಪ್ಪ ತಿಳಿಸಿದರು.
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷಟಿ.ಎಂ.ಚಿಕ್ಕಣ್ಣ, ಉಪಾಧ್ಯಕ್ಷ ವೆಂಕೋಜಿ ರಾವ್,ನಿರ್ದೇಶಕರಾದ ಅರಸಪ್ಪ, ಮೋಹನ್‌ಕುಮಾರ್,ಲಕ್ಷ್ಮೀ ನರಸಪ್ಪ, ಮುತ್ತಕ್ಕ, ಟಿ.ಎಸ್.ಕೃಷ್ಣಪ್ಪ,ಗಂಗರಾಜು, ಲಕ್ಷ್ಮಮ್ಮ, ಸೋಮಶೇಖರ ರೆಡ್ಡಿ,ಸುವರ್ಣಮ್ಮ, ಗ್ರಾಪಂ ಸದಸ್ಯೆ ಭವಾನಿ ನಾಗೇಶ್‌ಹಾಜರಿದ್ದರು.