ಕೀವ್: ಸತತ 11 ತಿಂಗಳಿನಿಂದ ರಷ್ಯಾದ ಆಕ್ರಮಣವನ್ನು ಎದುರಿಸಿ ನಿಂತಿರುವ ಉಕ್ರೇನ್‌ಗೆ ಈಗ ಒಳಗಿಂದಲೇ ಶತ್ರುಗಳು ಎದುರಾಗಿದ್ದಾರೆ. ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆ ದೇಶದ ಹಲವು ಅಧಿಕಾರಿಗಳು, ಸಚಿವರೂ ರಾಜೀನಾಮೆ ನೀಡಿದ್ದಾರೆ.
ಸಶಸ್ತ್ರ ಸೇನಾಪಡೆಗಳಿಗೆ ಆಹಾರ ಪೂರೈಕೆಯಲ್ಲಿ ನಡೆದಿರುವ ಹಗರಣ ಉಕ್ರೇನ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ರಷ್ಯಾ, ಉಕ್ರೇನ್ ತನ್ನದೆಂದು ಹೇಳಿಕೊಂಡು ಯುದ್ಧ ನಡೆಸುತ್ತಿದೆ.
ಇಂತಹ ಹೊತ್ತಿನಲ್ಲೇ ಭ್ರಷ್ಟಾಚಾರದ ಪ್ರಕರಣ ಬಯಲಾಗಿರುವುದು ರಷ್ಯಾಕ್ಕೆ ಪ್ರಬಲ ಅಸ್ತ್ರವನ್ನೇ ಕೊಟ್ಟಂತಾಗಿದೆ. ಮತ್ತೂಂದು ಕಡೆ ಉಕ್ರೇನ್‌ಗೆ ಆರ್ಥಿಕ, ಸೇನಾ ನೆರವು ನೀಡುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ನೆರವಿಗೆ ಸರಿಯಾದ ಲೆಕ್ಕ ಕೊಡಬೇಕು ಎಂದು ಕೇಳಲು ಆರಂಭಿಸಿದ್ದಾರೆ. ಉಕ್ರೇನ್‌ಗೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೆರವು ನೀಡುತ್ತಿರುವ ಅಮೆರಿಕವೂ ಇದನ್ನೇ ಪುನರುಚ್ಚಿಸಿದೆ.
ಇದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿಗೆ ತೀವ್ರ ಇಕ್ಕಟ್ಟಿನ ಪರಿಸ್ಥಿತಿಯನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಕಚೇರಿಯ ಉಪಾಧ್ಯಕ್ಷ ಕಿರಿಲೊ ಟೈಮೊಶೆಂಕೊ ಕೂಡ ರಾಜೀನಾಮೆ ನೀಡಿದ್ದಾರೆ. ಹಗರಣ ಬೆಳಕಿಗೆ ಬಂದ ನಂತರ ಮಂಗಳವಾರ ಹಲವರು ನೀಡಿದ್ದಾರೆ. ಆ ಪತ್ರಗಳನ್ನಿಟ್ಟುಕೊಂಡು ಉಕ್ರೇನ್ ಸರ್ಕಾರ ತಾನು ಪಾರದರ್ಶಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆಂದು ಬಿಂಬಿಸಿಕೊಳ್ಳುತ್ತಿದೆ. ಇದು ಎಷ್ಟರಮಟ್ಟಿಗೆ ಎಲ್ಲರನ್ನು ಸಮಾಧಾನಪಡಿಸುತ್ತದೆ ಕಾದು ನೋಡಬೇಕು. ಉಕ್ರೇನ್‌ನಲ್ಲಿನ ತೀವ್ರ ಭ್ರಷ್ಟಾಚಾರವನ್ನು ವಿರೋಧಿಸಿಯೇ ಝೆಲೆನ್ಸಿ$Rಗೆ 2019ರಲ್ಲಿ ಅಧಿಕಾರಕ್ಕೇರಿದ್ದರು ಎನ್ನುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಎಫೆಕ್ಟ್: ಷೇರುಪೇಟೆ ಸೆನ್ಸೆಕ್ಸ್ 773 ಅಂಕ ಕುಸಿತ