Advertisement
ವಾಹನ ಮತ್ತು ಜನಸಂಚಾರ ಅಧಿಕವಿ ರುವ ಪಿವಿಎಸ್ ಜಂಕ್ಷನ್, ಲಾಲ್‌ಬಾಗ್ ಜಂಕ್ಷನ್ ಹಾಗೂ ಹಂಪನಕಟ್ಟೆ ಜಂಕ್ಷನ್‌ಗಳಲ್ಲಿ ಸಿಗ್ನಲ್ ವ್ಯವಸ್ಥೆ ಇದೆ. ಆದರೆ ಹಂಪನಕಟ್ಟೆ ಹೊರತುಪಡಿಸಿ ಇತರ ಎರಡು ಜಂಕ್ಷನ್‌ಗ ಳಲ್ಲಿಯೂ ಝೀಬ್ರಾ ಕ್ರಾಸಿಂಗ್‌ನ ಬಣ್ಣ (ಕಪ್ಪು, ಬಿಳಿ) ಅಳಿಸಿ ಹೋಗಿದೆ. ಕೆಲವೆಡೆ ಝೀಬ್ರಾ ಕ್ರಾಸಿಂಗ್‌ನ ಕುರುಹು ಕೂಡ ಇಲ್ಲ!
ಸಿಗ್ನಲ್‌ಗಳಿರುವ ಸ್ಥಳಗಳು ಸಹಿತ ಜಂಕ್ಷನ್‌ಗಳಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಅತೀ ಅವಶ್ಯ. ಸಿಗ್ನಲ್‌ಗಳಿರುವ ಜಂಕ್ಷನ್‌ಗಳಲ್ಲಿ ಪಾದಚಾರಿಗಳ ಸಂಚಾರಕ್ಕೆಂದೇ ನಿರ್ದಿಷ್ಟ ಕಾಲಾವಕಾಶ ನೀಡಲಾಗುತ್ತದೆ. ಆ ವೇಳೆ ಝೀಬ್ರಾ ಕ್ರಾಸಿಂಗ್‌ನಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಸಾಧ್ಯವಿರುತ್ತದೆ. ಸಿಗ್ನಲ್‌ನಲ್ಲಿ ವಾಹನಗಳಿಗೆ ಕೆಂಪು ದೀಪ ತೋರಿಸಿದಾಗ ವಾಹನಗಳು ಝೀಬ್ರಾ ಕ್ರಾಸಿಂಗ್ ಸ್ಥಳದಿಂದ ಹಿಂದಕ್ಕೆ ನಿಲ್ಲಿಸಬೇಕಾದುದು ನಿಯಮ. ಆದರೆ ಝೀಬ್ರಾ ಕ್ರಾಸಿಂಗ್ ಬಣ್ಣ ಕಳೆದುಕೊಂಡಿರುವ ಸ್ಥಳಗಳಲ್ಲಿ ವಾಹನಗಳು ಝೀಬ್ರಾ ಕ್ರಾಸಿಂಗ್ ಸ್ಥಳವನ್ನು ಕೂಡ ದಾಟಿ ಮುಂದೆ ಬಂದಿರುತ್ತವೆ. ಇದರಿಂದಾಗಿ ಜನ ರಸ್ತೆ ದಾಟಲು ಸ್ಥಳವೇ ಸಿಗುತ್ತಿಲ್ಲ. ಸಿಗ್ನಲ್ ಲೈಟ್‌ಗಳು ಇಲ್ಲದ ಜಂಕ್ಷನ್‌ಗಳಲ್ಲಿಯೂ ಝೀಬ್ರಾ ಕ್ರಾಸಿಂಗ್ ಮಾರ್ಕ್ ಅತೀ ಅಗತ್ಯ. ಝೀಬ್ರಾ ಕ್ರಾಸಿಂಗ್ ಇದ್ದರೆ ವಾಹನ ಚಾಲಕರು ವಾಹನದ ವೇಗ ತಗ್ಗಿಸುತ್ತಾರೆ. ಇದು ನಿಯಮ ಕೂಡ ಹೌದು. ಆಗ ರಸ್ತೆ ದಾಟುವವರಿಗೆ ಅಪಾಯ ಕಡಿಮೆ.
Related Articles
ಸಿಗ್ನಲ್‌ಗಳು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್ ಗುರುತಿನ ಬಣ್ಣ ಅಳಿಸಿ ಹೋಗಿರುವ ಬಗ್ಗೆ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ತಿಳಿಸಲಾಗಿದೆ. ಪಾಲಿಕೆಯವರು ಶೀಘ್ರ ಕೆಲಸ ನಡೆಸುವ ನಿರೀಕ್ಷೆ ಇದೆ.
-ಗೀತಾ ಕುಲಕರ್ಣಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು
Advertisement