Advertisement

ಯಶಸ್ಸು ಪಡೆಯುವ ಹುಮ್ಮಸ್ಸು ಇರಲಿ: ಡಾ|ರಿಯೋ

12:50 PM Mar 28, 2017 | Team Udayavani |

ನಿಟ್ಟೆ: “ಪ್ರಸ್ತುತ ಸಮಾಜ ದಲ್ಲಿ ಪ್ರತಿಯೋರ್ವನೂ ಯಶಸ್ಸು ಪಡೆಯುವ ಹುಮ್ಮಸ್ಸಿನೊಂದಿಗೆ ಒಂದು ಗುರಿಯನ್ನು ಹೊಂದಿರುತ್ತಾನೆ. ಇಂದು ಮಾನವನು ನಿಸರ್ಗವನ್ನು ಅನುಕರಿಸುವ ಮೂಲಕ ಹೊಸ ಅನ್ವೇಷಣೆಗಳನ್ನು ಕೈಗೆತ್ತಿಕೊಳ್ಳುತ್ತಾನೆ’ ಎಂದು ಸಂತ ಜೋಸೆಫ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ರಿಯೋ ಡಿ’ ಸೋಜಾ  ಹೇಳಿದರು.

Advertisement

ಇಲ್ಲಿನ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗವು ಹಮ್ಮಿಕೊಂಡಿದ್ದ ಮೂರು ದಿನಗಳ ಎಫ್‌. ಡಿ. ಪಿ. ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಇಂದು ವಿಶ್ವದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ಅಧ್ಯಾಪಕರು ಬಹಳಷ್ಟು ಅಧ್ಯಯನ ಮಾಡುತ್ತಿರಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಅಪ್‌ಡೇಟ್‌ ಆಗುವುದು ಅತ್ಯಗತ್ಯ. ಕಲಿಕೆ ನಿರಂತರವಾಗಿರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ ಎನ್‌. ಚಿಪ್ಳೂಣRರ್‌ ಅವರು, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ನ್ಯಾಚುರಲ್‌ ಲ್ಯಾಂಗ್ವೇಜ್‌   ಪ್ರೊಸೆಸಿಂಗ್‌ ಮತ್ತು ಮೆಷಿನ್‌ ಲರ್ನಿಂಗ್‌’ ಕುರಿತ ಕಾರ್ಯಾಗಾರ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಈಗಿನ ತಂತ್ರಜ್ಞಾನದ ಯುಗಕ್ಕೆ ಇಂತಹ ಕಾರ್ಯಾಗಾರದ ವಿಷಯಗಳು ಬಹಳ ಪ್ರಸ್ತುತವೆನಿಸುತ್ತವೆ. ನಮ್ಮ ಸಂಸ್ಥೆಯು ಇಂದು ಪಠ್ಯ ಮತ್ತು ಪಠ್ಯೇತರವಾಗಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಬೆಳೆಯುತ್ತಿದೆ. ಸಂಸ್ಕೃತದಂತಹ ನೈಜ ಭಾಷೆಗಳನ್ನು ಬಳಸಿ ತಂತ್ರಜ್ಞಾನವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡುಹೋಗುವ ಒಂದು ಚಿಂತನೆ ಅಗತ್ಯವಿದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ.ಆರ್‌. ಮಿತ್ತಂತಾಯ, ಡಾ | ಶ್ರೀನಿವಾಸ ರಾವ್‌ ಬಿ.ಆರ್‌., ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ನಿಟ್ಟೆ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ದಯ್‌ಕುಮಾರ್‌ ರೆಡ್ಡಿ ಸ್ವಾಗತಿಸಿದರು. 

ಸಹಪ್ರಾಧ್ಯಾಪಕಿ ಶಿಲ್ಪಾ ಅತಿಥಿಯನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕ ರೋಶನ್‌ ಫೆರ್ನಾಂಡಿಸ್‌ ವಂದಿಸಿದರು. ಸಹ ಪ್ರಾಧ್ಯಾಪಕಿ ಕೀರ್ತನಾ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕಿ ದಿವ್ಯಾ ಜೆನಿಫರ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next