Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜನಾ ನನ್ನ ಜೊತೆ ಕೊಲಂಬೋಗೆ ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಸಂಜನಾ ಏನಾದ್ರೂ ದಾಖಲೆ ಕೊಟ್ಟಿದ್ದಾರಾ? ಈಗ ಸಂಜನಾ ಬಿಟ್ಟು ಫಾಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಎಲ್ಲೂ ತಪ್ಪು ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಾಡಲಿ ಎಂದರು.
Related Articles
Advertisement
ಫಾಸಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಸಿಲ್ ಗೂ ನನಗೂ ಯಾವುದೇ ಸಂಬಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ. ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರ್ತಾರೆ. ಅವನೂ ಬಂದಿರಬಹುದು. ರಾಜ್ಯದಿಂದ ಸಾವಿರಾರು ಜನ ಬರ್ತಾರೆ. ತಪ್ಪು ಮಾಡಿದ್ದರೆ ಯಾರೇ ಆಗಲಿ ಶಿಕ್ಷೆ ಕೊಡಲಿ ಎಂದರು.
ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಉತ್ತರಿಸಿದ ಜಮೀರ್, ಕೊಲಂಬೋಗೆ ಹೋಗುವುದು ತಪ್ಪಾ? ನಾನು ನನ್ನ ಫ್ಯಾಮಿಲಿ ಜೊತೆ ಎರಡು ಬಾರಿ ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಹೋಗಿದ್ದೇವೆ. ಕೊಲಂಬೋಗೆ ಪ್ರವಾಸಕ್ಕೆ ಹೋಗಿದ್ದೆವು. ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದ ಹಾಗೆ ಅಲ್ಲ ಎಂದರು.