Advertisement

ಮಣಿಪುರ ವಿದ್ಯಾರ್ಥಿಗಳ ಜತೆಗೆ ಜಮೀರ್‌ ಹುಟ್ಟುಹಬ್ಬ ಆಚರಣೆ

10:08 AM Aug 02, 2023 | Team Udayavani |

ಬೆಂಗಳೂರು: ಮಣಿಪುರದ ಜನಾಂಗೀಯ ಘರ್ಷಣೆ ಹಿನ್ನೆಲೆಯಲ್ಲಿ ಆಶ್ರಯ ಕೋರಿ ಬೆಂಗಳೂರಿಗೆ ಬಂದು ಸೆಂಟ್‌ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಉಳಿದುಕೊಂಡಿರುವ 29 ವಿದ್ಯಾರ್ಥಿಗಳನ್ನು ದತ್ತು ಪಡೆಯುವುದಾಗಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

Advertisement

ಚಾಮರಾಜಪೇಟೆಯ ಸೆಂಟ್‌ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ಮಣಿಪುರ ಮೂಲದ ವಿದ್ಯಾರ್ಥಿಗಳ ಜತೆಗೆ ಮಂಗಳವಾರ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. 29 ವಿದ್ಯಾರ್ಥಿನಿಯರ ಸಂಪೂರ್ಣ ಶಿಕ್ಷಣ ಹಾಗೂ ಆರೈಕೆ ವೆಚ್ಚ ಭರಿಸುವುದಾಗಿ ಹೇಳಿ ಇದೇ ಸಂದರ್ಭದಲ್ಲಿ ಘೋಷಿಸಿ 2 ಲಕ್ಷ ರೂ. ನೀಡಿದರು.

ಮಣಿಪುರದಿಂದ ಆಗಮಿಸಿರುವ ವಿದ್ಯಾರ್ಥಿನಿಯರು ಎಲ್ಲಿಯವರೆಗೆ ಇಲ್ಲಿರು­ತ್ತಾರೋ ಅಲ್ಲಿವರೆಗೆ ಸಂಪೂರ್ಣ ಶಿಕ್ಷಣ ಮತ್ತು  ದೈನಂದಿನ ಊಟ ತಿಂಡಿ ಆರೈಕೆ ವ್ಯವಸ್ಥೆ ನೋಡಿಕೊಳ್ಳುವುದಾಗಿ ಹೇಳಿದರು. ಮಣಿಪುರ ವಿದ್ಯಾರ್ಥಿಗಳ ಜತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಮಣಿಪುರ ವಿದ್ಯಾರ್ಥಿಗಳ ಜತೆಯೇ ಉಪಹಾರ ಸೇವಿಸಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 250 ಮಕ್ಕಳಿಗೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಾತ್ರಿ ಊಟದ ವ್ಯವಸ್ಥೆ ಮಾಡಿದರು. ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು, 29 ವಿದ್ಯಾರ್ಥಿಗಳಿಗೆ ಸೆಂಟ್‌ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ  ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿದೆ. ಉಳಿದವರಿಗೆ ಇದೇ ಸಂಸ್ಥೆಯ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವೇಳೆ ಸೆಂಟ್‌ ತೆರೇಸಾ ವಿದ್ಯಾ ಸಂಸ್ಥೆಯ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next