Advertisement

ಬಂಧಿತ ಯುವಕರಿಗಿತ್ತು ಝಾಕೀರ್‌ ನಾಯ್ಕ ಪ್ರೇರಣೆ

11:55 PM Aug 04, 2023 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಇತ್ತೀಚೆಗೆ ಬಂಧಿತರಾಗಿರುವ ಐವರು ಯುವಕರು ಇಸ್ಲಾಮಿಕ್‌ ಧಾರ್ಮಿ ಕ ವಿದ್ವಾಂಸ ಡಾ| ಝಾಕೀರ್‌ ನಾಯ್ಕನಿಂದ ಪ್ರೇರಣೆ ಹೊಂದಿದ್ದರು. ಜತೆಗೆ ಆ ಐವರಲ್ಲಿ ಒಬ್ಬ ಯುಟ್ಯೂಬ್‌ ವೀಡಿಯೋ ನೋಡಿ ಬಾಂಬ್‌ ತಯಾರು ಮಾಡುವುದನ್ನು ಕಲಿತಿದ್ದ ಎಂದು ಉಗ್ರ ನಿಗ್ರಹದಳ ತನಿಖೆಯಿಂದ ಕಂಡುಕೊಂಡಿದೆ. ಅದನ್ನು ಪುಣೆ, ಮುಂಬಯಿ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ ಪರೀಕ್ಷೆ ಕೂಡ ಮಾಡ ಲಾಗಿತ್ತು ಎಂದೂ ತಿಳಿದುಬಂದಿದೆ.

Advertisement

ಉಗ್ರ ಸಂಘಟನೆ ಐಸಿಸ್‌ ತತ್ವಗಳಿಂದ ಪ್ರೇರಿತಗೊಂಡು ಉಗ್ರಗಾಮಿ ಚಟುವಟಿಕೆ ನಡೆಸಲು ಅವರು ಸಿದ್ಧತೆ ನಡೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಸ್ಫೋಟ ನಡೆಸಲೂ ಯೋಜನೆ ಹಾಕಿಕೊಂಡಿದ್ದರು ಎಂಬ ವಿಚಾರವೂ ಬಹಿರಂಗವಾಗಿದೆ.

ತಾಂತ್ರಿಕವಾಗಿ ಹೆಚ್ಚು ಅನುಭವ ಹೊಂದಿ ರುವ ಈ ಗುಂಪು, ಜಾಲತಾಣಗಳ ಮೂಲ ಕವೇ ದ್ವೇಷಮಯ ವಾತಾವರಣ ಸೃಷ್ಟಿಸುವ ಅಂಶಗಳನ್ನು ಪ್ರಚಾರ ಮಾಡಿದ್ದರು. ಈ ಮೂಲಕ ಯುವಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್‌ ನೌ’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next