Advertisement

ಝಾಕಿರ್‌ ನಾಯ್ಕ ಪಾಸ್‌ಪೋರ್ಟ್‌ ರದ್ದು

03:45 AM Jul 19, 2017 | Team Udayavani |

ನವದೆಹಲಿ: ವಿವಾದಾತ್ಮಕ ಇಸ್ಲಾಂ ಧಾರ್ಮಿಕ ಮುಖಂಡ ಝಾಕಿರ್‌ ನಾಯ್ಕನ ಪಾಸ್‌ಪೋರ್ಟ್‌ ಅನ್ನು ಮುಂಬೈನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಮಂಗಳವಾರ ರದ್ದು ಮಾಡಿದೆ. ಉಗ್ರ ಸಂಘಟನೆಗಳಿಗೆ ಧನ ಸಹಾಯ ಸೇರಿ ಹಲವಾರು ಮೊಕದ್ದಮೆಗಳಲ್ಲಿ ನಾಯ್ಕ ಆರೋಪಿಯಾಗಿದ್ದಾನೆ. ಅಲ್ಲದೇ ಜು.13ರಂದು ರಾಷ್ಟ್ರೀಯ ತನಿಖಾ ತಂಡದೆದುರು ವಿಚಾರಣೆಗೆ ಹಾಜರಾಗಲು ಆತನಿಗೆ ನೋಟಿಸ್‌ ನೀಡಲಾಗಿತ್ತಾದರೂ, ಆತ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಎ ಆತನ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಪಾಸ್‌ಪೋಟ್‌ ಕಚೇರಿಗೆ ಮನವಿ ಸಲ್ಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next