Advertisement

ಸಾನಿಯಾ-ಮಲಿಕ್‌ ಜತೆ ಜಹೀರ್‌, ನೆಹ್ರಾ

08:35 AM Jul 19, 2017 | |

ಲಂಡನ್‌: ಲಂಡನ್‌ನಲ್ಲಿ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಅವರ ಪತಿ ಪಾಕ್‌ ಕ್ರಿಕೆಟಿಗ ಶೋಯಿಬ್‌ ಮಲಿಕ್‌ ಜತೆಯಲ್ಲಿ ಜಹೀರ್‌ ಖಾನ್‌ ಮತ್ತು ಆಶೀಷ್‌ ನೆಹ್ರಾ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಒಟ್ಟಿಗೆ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. 

Advertisement

ಚಿತ್ರದಲ್ಲಿ ಸಾನಿಯಾ, ಜಹೀರ್‌, ನೆಹ್ರಾ, ಶೋಯಿಬ್‌ ಮಲಿಕ್‌, ಪಾಕ್‌ ಕ್ರಿಕೆಟಿಗ ಅಜರ್‌ ಮೊಹಮ್ಮದ್‌, ಬಾಲಿವುಡ್‌ ನಟ ಹರ್ಮನ್‌ ಬವೇಜಾ ಇದ್ದಾರೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ವಿಂಬಲ್ಡನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌, ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡರು. ಪಾಕ್‌ ತಂಡಕ್ಕೆ ಯಾವುದೇ ಸರಣಿ ಇಲ್ಲದಿರುವುದರಿಂದ ಶೋಯಿಬ್‌ ಮಲಿಕ್‌ ಬಿಡುವಿನ ಸಮಯದಲ್ಲಿ ಸಾನಿಯಾ ಜತೆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next