Advertisement

ಏಷ್ಯಾ ಕಪ್‌ ಕ್ರಿಕೆಟ್‌: ಅಫ್ಘಾನಿಸ್ಥಾನಕ್ಕೆ 7 ವಿಕೆ‌ಟ್‌ ಭರ್ಜರಿ ಗೆಲುವು

11:17 PM Aug 30, 2022 | Team Udayavani |

ಶಾರ್ಜಾ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಅಫ್ಘಾನಿಸ್ಥಾನ ತಂಡವು ಮಂಗಳವಾರ ನಡೆದ “ಬಿ’ ಬಣದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತಲ್ಲದೇ ಸತತ ಎರಡನೇ ಗೆಲುವಿನಿಂದ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್‌ ಹಂತಕ್ಕೇರಿತು.

Advertisement

ಸೂಪರ್‌ ಫೋರ್‌ ಹಂತದಲ್ಲಿ ಪ್ರತಿಯೊಂದು ತಂಡವು ಎದುರಾಳಿ ವಿರುದ್ಧ ಆಡಲಿದ್ದು ಗರಿಷ್ಠ ಅಂಕ ಗಳಿಸಿದ ಎರಡು ತಂಡಗಳು ಫೈನಲಿಗೇರಲಿವೆ.

ಮುಜೀಬ್‌ ಉರ್‌ ರೆಹಮಾನ್‌ ಮತ್ತು ರಶೀದ್‌ ಖಾನ್‌ ಅವರ ಸ್ಪಿನ್‌ ದಾಳಿಗೆ ಕುಸಿದ ಬಾಂಗ್ಲಾ ತಂಡವು 7 ವಿಕೆಟಿಗೆ 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಜರ್ದಾನ್‌ದ್ವಯರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದಿಂದ ಅಫ್ಘಾನಿಸ್ಥಾನ ತಂಡವು 18.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ನಷ್ಟದಲ್ಲಿ 131 ರನ್‌ ಗಳಿಸಿ ಜಯಭೇರಿ ಬಾರಿಸಿತು. ಇದು ಈ ಕೂಟದಲ್ಲಿ ಅಫ್ಘಾನಿಸ್ಥಾನ ತಂಡದ ಎರಡನೇ ಗೆಲುವು ಆಗಿದೆ. ಮೊದಲ ಲೀಗ್‌ ಪಂದ್ಯದಲ್ಲಿ ಅದು ಶ್ರೀಲಂಕಾವನ್ನು ಭರ್ಜರಿಯಾಗಿ ಸೋಲಿಸಿತ್ತು.

ಅಫ್ಘಾನಿಸ್ಥಾನದ ಸ್ಪಿನ್‌ ದಾಳಿಯನ್ನು ಸ್ವಲ್ಪಮಟ್ಟಿಗೆ ಮೊಸ್ಸಾ ಡೆಕ್‌ ಹೊಸೈನ್‌ ದಿಟ್ಟವಾಗಿ ಎದುರಿಸಿದರು. ಅವರು 31 ಎಸೆತ ಗಳಿಂದ 48 ರನ್‌ ಗಳಿಸಿ ಅಜೇಯರಾಗಿ ಉಳಿದರು. ಉಳಿದ ಯಾವುದೇ ಆಟಗಾರ ಉತ್ತಮವಾಗಿ ಆಡಲು ವಿಫ‌ಲರಾ ದರು. ಮುಜೀಬ್‌, ರಶೀದ್‌ ತಲಾ ಮೂರು ವಿಕೆಟ್‌ ಪಡೆದರು.

ಜರ್ದಾನ್‌ದ್ವಯರ ಅಮೋಘ ಆಟದಿಂದ ಅಫ್ಘಾನಿಸ್ಥಾನ ಸುಲಭ ಗೆಲುವು ಸಾಧಿಸಿತು. ಅವರಿಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ 69 ರನ್‌ ಪೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ನಜಿಬುಲ್ಲ ಜರ್ದಾನ್‌ ಕೇವಲ 17 ಎಸೆತ ಎದುರಿಸಿ 1 ಬೌಂಡರಿ ಮತ್ತು 6 ಅಮೋಘ ಸಿಕ್ಸರ್‌ ನೆರವಿನಿಂದ 43 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಇಬ್ರಾಹಿಂ ಜರ್ದಾನ್‌ 41 ಎಸೆತ ಎದುರಿಸಿ 42 ರನ್‌ ಹೊಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next