Advertisement

ವಾಯುಪಡೆ, ನೌಕಾಪಡೆಯ ಮುಖ್ಯಸ್ಥರಿಗೆ ಝೆಡ್‌+ ಭದ್ರತೆ

12:30 AM Mar 02, 2019 | |

ಪುಲ್ವಾಮಾ ದಾಳಿ ಹಾಗೂ ಅದರ ನಂತರ ನಡೆದ ಘಟನಾವಳಿಗಳ ಹಿನ್ನೆಲೆಯಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಿಗೆ ಹಾಗೂ ಅವರ ಮನೆಗಳಿಗೆ ಝೆಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಲಾಗಿದೆ. ನೌಕಾಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ ಮತ್ತು ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾಗೆ ಭದ್ರತೆಯನ್ನು ಒದಗಿಸಲಾಗಿದೆ. ಈಗಾಗಲೇ ಸೇನಾ ಮುಖ್ಯಸ್ಥರಿಗೆ ಝೆಡ್‌ ಪ್ಲಸ್‌ ಸೆಕ್ಯುರಿಟಿ ನೀಡಲಾಗುತ್ತಿದೆ. 

Advertisement

ಆದರೆ ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರಿಗೆ ಈ ಭದ್ರತೆ ಇರಲಿಲ್ಲ. ಈಗ ಅವರ ಪಡೆಯ ಕಮಾಂಡೋಗಳಿಂದಲೇ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಗುಪ್ತಚರ ದಳ ಮತ್ತು ಗೃಹ ಸಚಿವಾಲಯವು ವಿಐಪಿ ಭದ್ರತಾ ಮರುಪರಿಶೀಲನೆ ನಡೆಸಿದ್ದು, ಈ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಗಿತ್ತು. ಝೆಡ್‌ ಪ್ಲಸ್‌ ಭದ್ರತೆಯಿಂದಾಗಿ 36 ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗುತ್ತದೆ. ಎರಡೂ ಪಡೆಗಳ ಮುಖ್ಯಸ್ಥರ ಮನೆಗಳಿಗೆ ದಿಲ್ಲಿ ಪೊಲೀಸರು ಭದ್ರತೆ ಒದಗಿಲಿದ್ದಾರೆ. ಆದರೆ ಅವರು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸುವಾಗ ಕಮಾಂಡೋ ಜೊತೆಗೆ ಯಾವ ವಿಭಾಗದ ಪೊಲೀಸರು ಭದ್ರತೆ ಒದಗಿಸುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next