Advertisement

ನಿವೃತ್ತಿ ಬಳಿಕ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ಗೆ ಝೆಡ್‌ ಪ್ಲಸ್‌ ಭದ್ರತೆ

10:11 AM Nov 17, 2019 | Team Udayavani |

ನವದೆಹಲಿ: ಭಾನುವಾರ ಅಧಿಕೃತವಾಗಿ ನಿವೃತ್ತಿಯಾಗಲಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ನಿವೃತ್ತಿ ಬಳಿಕ ಝೆಡ್‌ ಪ್ಲಸ್‌ ಭದ್ರತೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ನ್ಯಾ.ಗೊಗೋಯ್‌ ಅವರು ನಿವೃತ್ತಿ ನಂತರ ಅಸ್ಸಾಂನಲ್ಲೇ ವಾಸಿಸಲಿದ್ದು, ದಿಬ್ರುಗಡ ಹಾಗೂ ಗುವಾಹಟಿಯಲ್ಲಿರುವ ಅವರ ನಿವಾಸಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ಜವಾಬ್ದಾರಿಯನ್ನು ಅಸ್ಸಾಂ ಪೊಲೀಸರು ವಹಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಯೋಧ್ಯೆ ಭೂವಿವಾದದ ತೀರ್ಪಿಗೂ ಮುನ್ನವೇ ಸಿಜೆಐ ಗೊಗೋಯ್‌ ಅವರ ಭದ್ರತೆಯನ್ನು ಝೆಡ್‌ ಪ್ಲಸ್‌ಗೆ ಏರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next