Advertisement
ಭಾರತ ನೀಡಿದ 381 ರನ್ನುಗಳ ಗುರಿಯನ್ನು ಭರ್ಜರಿಯಾಗಿ ಬೆನ್ನಟ್ಟಿದ ಆಂಗ್ಲರ ಪಡೆ ಅಂತಿಮವಾಗಿ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 366 ರನ್ನುಗಳಷ್ಟನ್ನೇ ಕಲೆಹಾಕುವಲ್ಲಿ ಸಫಲವಾಗಿ 15 ರನ್ನುಗಳಿಂದ ಸೋಲುಂಡಿತು.
ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸೀ ಇಂಗ್ಲಂಡ್ ತಂಡದೆದುರಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಅಮೋಘ 150 ರನ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ 134 ರನ್ ಗಳ ನೆರವಿನೊಂದಿಗೆ 381 ರನ್‌ಗಳ ಉತ್ತಮ ಮೊತ್ತವನ್ನು ಭಾರತ ಕಲೆ ಹಾಕಿದೆ. ಆ ಮೂಲಕ ಇಂಗ್ಲಂಡ್‌ಗೆ ಈ ಪಂದ್ಯಗೆಲ್ಲಲು 382 ರನ್‌ಗಳ ಗುರಿಯನ್ನು ನಿಗಿದಿಸಿದೆ.
Related Articles
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಭಾರತಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. 23 ರನ್‌ಗಳ ಒಳಗೆ 3 ವಿಕೆಟ್ ಪಡೆದು ಹಿಗ್ಗಿತ್ತು. ಆರಂಭಿಕರಾದ ಕೆ.ಎಲ್.ರಾಹುಲ್ 5 ರನ್, ಧವನ್ 11 ರನ್‌ಗಳಿಸಿ ಪೆವಿಲಿಯನ್‌ಗೆ ವಾಪಾಸಾದರೆ ನಾಯಕ ಕೊಹ್ಲಿ 8 ರನ್‌ಗೆ ಔಟಾಗುವ ಮೂಲಕ ತೀವ್ರ ನಿರಾಶರಾದರು. ಆ ಬಳಿಕ ಬ್ಯಾಟಿಂಗ್‌ಗಿಳಿದು ಕ್ರೀಸ್ ಆಕ್ರಮಿಸಿಕೊಂಡ ಯುವರಾಜ್ ಮತ್ತು ಧೋನಿ ನೆಲ ಕಚ್ಚಿ ಆಡುವ ಮೂಲಕ ಆಂಗ್ಲರ ಬೆವರಿಳಿಸಿದರು. ಯುವರಾಜ್ ನೋಡನೋಡುತ್ತಿದ್ದಂತೆ ಶತಕ ಸಿಡಿಸಿದರು. 98 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಬರೋಬ್ಬರಿ 150 ರನ್ ಗಳಿಸಿ ಔಟಾದರು.
Advertisement
6 ವರ್ಷಗಳ ಬಳಿಕ ಶತಕ ಯುವರಾಜ್ ಸಿಂಗ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಕೊನೆಯದಾಗಿ 2011 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಶತಕ ಸಿಡಿಸಿದ್ದರು. ಇದು ಅವರ ಏಕದಿನ ಕ್ರಿಕೆಟ್‌ನ 14 ನೇ ಶತಕ ಮತ್ತು ಗರಿಷ್ಠ ಸ್ಕೋರ್ ಆಗಿದೆ.