Advertisement

ಕ್ಯಾನ್ಸರ್‌ ಗೆದ್ದವರಿಗೆ ಯುವಿ ಸಾಧನೆ ಅರ್ಪಣೆ

02:14 PM Jun 06, 2017 | Team Udayavani |

ಕ್ಯಾನ್ಸರ್‌ ಸರ್ವೈವರ್‌ ಡೇ ದಿನವೇ ಯುವಿ ಶೋ !

Advertisement

ಬರ್ಮಿಂಗಂ: ಪಾಕಿಸ್ಥಾನ ವಿರುದ್ಧದ ಪಂದ್ಯಶ್ರೇಷ್ಠ ಆಟಗಾರ ಯುವರಾಜ್‌ ಸಿಂಗ್‌ ತಮ್ಮ ಈ ಗೌರವವನ್ನು ಕ್ಯಾನ್ಸರ್‌ ಜಯಿಸಿ ಹೊಸ ಬದುಕು ಆರಂಭಿಸಿದವರಿಗೆ ಹಾಗೂ ಲಂಡನ್‌ ಸ್ಫೋಟದಲ್ಲಿ ಮಡಿದವರಿಗೆ ಅರ್ಪಿಸಿದ್ದಾರೆ. 
ಕಾಕತಾಳೀಯವೆಂಬಂತೆ, ಜೂ. 4ರಂದು ಆಚರಿಸ ಲಾಗುವ “ಕ್ಯಾನ್ಸರ್‌ ಗೆದ್ದವರ ದಿನ’ದಂದೇ ಯುವರಾಜ್‌ ಇಂಥದೊಂದು ಅಮೋಘ ಇನ್ನಿಂಗ್ಸ್‌ ಆಡಿದ್ದರು. ಸ್ವತಃ ಯುವಿ ಈ ಮಹಾ ಮಾರಿಯ ದವಡೆಯಿಂದ ಪಾರಾಗಿ ಬಂದವರೆಂಬುದು ಇಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ.

“ನನ್ನ ಈ ಪಂದ್ಯಶ್ರೇಷ್ಠ ಇನ್ನಿಂಗÕನ್ನು ಕ್ಯಾನ್ಸರ್‌ನಿಂದ ಗುಣಮುಖರಾಗಿ ಹೊಸ ಬದುಕು ಆರಂಭಿ ಸಿದ ಎಲ್ಲ ಹೀರೋಗಳಿಗೆ ಹಾಗೂ ಲಂಡನ್‌ ಸ್ಫೋಟದಲ್ಲಿ ಮಡಿದವರಿಗೆ, ಅವರ ಕುಟುಂಬಗಳಿಗೆ ಅರ್ಪಿಸುತ್ತಿದ್ದೇನೆ…’ ಎಂದು ಯುವರಾಜ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

4ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಯುವರಾಜ್‌ ಸಿಂಗ್‌ ಕೇವಲ 32 ಎಸೆತಗಳಲ್ಲಿ 53 ರನ್‌ ಸಿಡಿಸಿ ಪಾಕ್‌ ದಾಳಿಯನ್ನು ಚೆಂಡಾಡಿದ್ದರು. ಸಿಡಿಸಿದ್ದು 8 ಬೌಂಡರಿ ಹಾಗೂ ಒಂದು ಸಿಕ್ಸರ್‌. 

ಸ್ಟ್ರೈಕ್‌ರೇಟ್‌ 165.62.
ರೋಹಿತ್‌, ಧವನ್‌, ಕೊಹ್ಲಿ ಅವರೆಲ್ಲ ಯುವರಾಜ್‌ಗಿಂತ ಹೆಚ್ಚು ರನ್‌ ಬಾರಿಸಿದರೂ ಪಂದ್ಯಶ್ರೇಷ್ಠ ಗೌರವ ಈ ಎಡಗೈ ಆಟಗಾರನಿಗೆ ಒಲಿದು ಬಂದಿತ್ತು. ಇದು ಯುವಿ ಆಟದ ಮಹತ್ವವನ್ನು ಸಾರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next