Advertisement

ಯುವರತ್ನ : ಪವರ್ ಆಫ್ ಪುನೀತ್ ; ಬಿ ಟೌನ್ ನಲ್ಲಿ ಕನ್ನಡದ ಹವಾ..

11:05 AM Oct 09, 2019 | Suhan S |

‘ಯುವರತ್ನ’. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಜೋಡಿಯ ಎರಡನೇ ಸಿನಿಮಾ. ಯುವರತ್ನ ಚಿತ್ರದ ಅಫೀಶೀಯಲ್ ಟೀಸರ್ ಬಿಡುಗಡೆ ಆಗಿದೆ. ಬಿಡುಗಡೆ ಆದ ಒಂದೇ ದಿನದಲ್ಲಿ 1 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ ಯುವರತ್ನದ ಟೀಸರ್ ಟ್ರೆಂಡಿಂಗ್ ನಲ್ಲಿದೆ.

Advertisement

ರಗ್ಬಿ ಆಟಗಾರನಾಗಿ ಪುನೀತ್ ಕಾಣಿಸಿಕೊಳ್ಳುತ್ತಿದ್ದು, 29 ನಂಬರಿನ ಜೆರ್ಸಿಯನ್ನು ಹಾಕಿಕೊಂಡು ಹೊಡೆಯುವ ಡೈಲಾಗ್ಸ್ ಇಡೀ ಟೇಸರ್ ನಲ್ಲಿ ಎದ್ದು ಕಾಣುವ ಅಂಶ. ಹೊಡೆದಾಟದ ದೃಶ್ಯ, ಟ್ರೋಫಿ ಎತ್ತಿ ಖದರ್ ತೋರಿಸುವ ದೃಶ್ಯಕ್ಕೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.

ಪುನೀತ್ 29 ನೇ ಚಿತ್ರವಾಗಿರುವುರಿಂದ  ಅವರು ತೊಟ್ಟಿರುವ ರಗ್ಬಿ ಆಟದ ಜೆರ್ಸಿಯಲ್ಲಿ ಅದೇ ಸಂಖ್ಯೆಯನ್ನು ಬರೆಯಲಾಗಿದೆ. ಯುವರತ್ನದ ಬಗ್ಗೆ ಬಾಲಿವುಡ್ ನಲ್ಲಿ  ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದು ಕೆ.ಜಿ.ಎಫ್ -2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟ ಸಂಜಯ್ ದತ್ ಯುವರತ್ನ ಟೀಸರ್ ಅನ್ನು ನೋಡಿ ಹಾಡಿ ಹೊಗಳಿದ್ದಾರೆ. “ ಯುವರತ್ನ ಚಿತ್ರದ ಟೀಸರ್ ಬ್ರಿಲಿಯಂಟ್ ಆಗಿದೆ” ಎಂದು ಚಿತ್ರ ತಂಡಕ್ಕೆ  ಶುಭ ಹಾರೈಸಿದ್ದಾರೆ.

ಚಿತ್ರದಲ್ಲಿ ಪ್ರಮುಖವಾಗಿ ಪುನೀತ್ ರಾಜುಕುಮಾರ್, ಸಯೇಶಾ ಸೈಗಲ್,ವಶಿಷ್ಠ ಸಿಂಹ, ಡಾಲಿ ಧನಂಜಯ್,ಪ್ರಕಾಶ್ ರಾಜ್,ಅಚ್ಯುತ್ ಕುಮಾರ್,ಸಾಯಿ ಕುಮಾರ್ ,ಸುಧಾರಾಣಿ ಸೇರಿದಂತೆ ಇತರೆ ಪ್ರಮುಖ ತಾರಂಗಣ ಕಾಣಿಸಿಕೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next