Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ವಿದಾಯ

02:38 PM Jun 11, 2019 | keerthan |

ಮುಂಬೈ: ನಿಯಮಿತ ಓವರ್ ಕ್ರಿಕೆಟ್ ನ ಶ್ರೇಷ್ಠ ಆಟಗಾರ, ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

Advertisement

“ನಾನೀಗ ವಿದಾಯ ಹೇಳುವ ಸಮಯ. ಅತ್ಯದ್ಭುತ ಪಯಣ ನನ್ನದು. ಆದರೆ ಈಗ ಅದನ್ನು ಅಂತಿಮಗೊಳಿಸುವ ಸಮಯ ಬಂದಿದೆ” ಎಂದು ತನ್ನ ವಿದಾಯ ಭಾಷಣದಲ್ಲಿ ಹೇಳಿದರು.

”ನಾನ್ಯಾವತ್ತೂ 10 ಸಾವಿರ ರನ್ ಗಳಿಸುವ ಬಗ್ಗೆ ಯೋಚನೆ ಮಾಡಿರಲಿಲ್ಲ. ವಿಶ್ವಕಪ್ ಜಯಿಸುವುದು ನನ್ನ ಗುರಿಯಾಗಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡದೇ ಇರುವುದಕ್ಕೆ ಇನ್ನೂ ಬೇಸರವಿದೆ. ಆದರೆ ಇನ್ನು 40  ಟೆಸ್ಟ್ ಆಡುವ ಅವಕಾಶ ಸಿಕ್ಕಿದ್ದರೆ ಚಿತ್ರಣವೇ ಬದಲಾಗುತ್ತಿತ್ತು” ಎಂದರು.

37ವರ್ಷ ಪ್ರಾಯದ ಯುವಿ ಮುಂಬೈನಲ್ಲಿ ತನ್ನ ವಿದಾಯವನ್ನು ಅಧಿಕೃತವಾಗಿ ಘೋಷಿಸಿದರು. ಇತ್ತೀಚಿನ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನ ಮಾಡುತ್ತಿದ್ದರೂ ವಿಫಲರಾಗಿದ್ದರು.

2000 ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಯುವರಾಜ್ ಕೀನ್ಯ ಎದುರು ಮೊದಲ ಪಂದ್ಯವಾಡಿದರು. ಒಟ್ಟು 304 ಏಕದಿನ ಪಂದ್ಯಗಳಲ್ಲಿ 8, 701 ರನ್ ಗಳಿಸಿರುವ ಯುವಿ 14ಶತಕ ಬಾರಿಸಿದ್ದಾರೆ.

Advertisement

2003ರಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಯುವಿ 40 ಟೆಸ್ಟ್ 1900 ರನ್ ಗಳಿಸಿದ್ದಾರೆ.

ಟಿ- ಟ್ವೆಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದ ಯುವಿ 58 ಪಂದ್ಯಗಳಲ್ಲಿ 1177 ರನ್ ಗಳಿಸಿದ್ದಾರೆ. ಮೊದಲ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಬಾರಿಸಿ ವಿಶ್ವ ಪ್ರಸಿದ್ದರಾಗಿದ್ದರು.

ಭಾರತದ ಎರಡು ವಿಶ್ವಕಪ್ ಗೆಲುವಿನಲ್ಲಿ ಈ ಎಡಗೈ ಆಟಗಾರನ ಪಾಲು ಬಹುದೊಡ್ಡದು. 2007ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆಂಗ್ಲರ ವಿರುದ್ಧ ಅತೀ ವೇಗದ ಅರ್ಧ ಶತಕ, ಆಸ್ಟ್ರೇಲಿಯಾ ವಿರುದ್ಧದ ಅದ್ಭುತ ಇನ್ನಿಂಗ್ಸ್ ಆ ವಿಶ್ವಕಪ್ ನಲ್ಲಿ ಭಾರತ ಗೆಲ್ಲಲು ಪ್ರಮುಖ ಕಾರಣವಾಗಿತ್ತು.

2011ರ ವಿಶ್ವಕಪ್ ಗೆಲ್ಲುವುದು ಯುವಿ ಕನಸಾಗಿತ್ತು. ಸರಣಿಯಲ್ಲಿ ಯುವರಾಜ್ ತನ್ನ ಶ್ರೇಷ್ಠ ಆಟವಾಡಿದರು. ಒಂದು ಶತಕ ಐದು ಅರ್ಧ ಶತಕ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

2011ರ ವಿಶ್ವಕಪ್ ವೇಳೆ ಕ್ಯಾನ್ಸರ್ ಎಂಬ ಮಹಾಮಾರಿ ಯುವರಾಜ್ ಗೆ ದೊಡ್ಡ ಆಘಾತ ನೀಡಿತು. ಇದರಿಂದ ಚೇತರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದರೂ ಹಿಂದಿನ ಖದರ್ ಮರುಕಳಿಸಲು ಸಾಧ್ಯವಾಗಲಿಲ್ಲ. ಒಂದು ಕಾಲದ ವಿಶ್ಚ ಶ್ರೇಷ್ಠ ಫೀಲ್ಡರ್ ಆಗಿದ್ದ ಯುವಿ ಮೈದಾನದಲ್ಲಿ ತಮ್ಮ ಲಯ ಕಂಡು ಕೊಳ್ಳಲು ಪರದಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next