Advertisement

ಯುವಜನ ಆಯೋಗಕ್ಕಾಗಿ ರಾಜ್ಯದಲ್ಲಿ ಯುವಾಂದೋಲನ

09:17 AM Jan 26, 2019 | |

ಕೋಲಾರ: ಯುವ ಜನರ ಗೊಂದಲ ಸಮಸ್ಯೆ ನಿವಾರಣೆಗೆ ರಾಜ್ಯದಲ್ಲಿ ಕೇರಳ ರಾಜ್ಯದ ಮಾದರಿ ಯುವ ಆಯೋಗ ಅತ್ಯಗತ್ಯವಾಗಿದ್ದು, ಸರಕಾರ ಯುವ ಆಯೋಗವನ್ನು ಆರಂಭಿಸಲು ಒತ್ತಾಯಿಸಿ ರಾಜ್ಯಾದ್ಯಂತ ಯುವಾಂದೋಲನ ನಡೆಸಲಾಗುತ್ತಿದೆ ಎಂದು ಸಂವಾದ ಯುವ ಸಂಪನ್ಮೂಲ ಕೇಂದ್ರದ ಮಧುಸೂದನ್‌ ಹೇಳಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಆಯೋಗದ ರೀತಿ ಯುವಜನರಿಗೆ ಬೆಂಬಲವಾಗಿ ಹಾಗೂ ಅವರ ಹಕ್ಕುಗಳ ಜತೆ ಮತ್ತಷ್ಟು ಹಕ್ಕುಗಳನ್ನು ಜಾರಿಮಾಡಿ ಅವುಗಳು ಸಾಕಾರಗೊಳ್ಳಲು ಯುವಜನ ಆಯೋಗ ಬೇಕೆಂದು ಯುವ ಮುನ್ನಡೆ ಹಾಗೂ ಕೆಲವು ಸಮಾನ ಮನಸ್ಕ ಸಂಘಟನೆಗಳು ಯುವಜನ ಆಯೋಗದ ಹಕ್ಕೊತ್ತಾಯಕ್ಕಾಗಿ ಯುವಾಂದೋಲನವನ್ನು ರಾಜ್ಯಾದ್ಯಂತ ಹಲವು ತಿಂಗಳು ಹಮ್ಮಿಕೊಳ್ಳಲಾಗಿದೆ ಎಂದರು.

ಫೆ.9ರಿಂದ ಆಂದೋಲನ: ಕಾರ್ಯಕರ್ತರು, ಯುವಜನ ಆಯೋಗದ ಹಕ್ಕೊತ್ತಾಯವನ್ನು ಸರ್ಕಾ ರದ ಗಮನಕ್ಕೆ ತರುವ ನಿಟ್ಟಿನಲ್ಲಿ ಯುವಾಂದೋಲನದ ಸಲುವಾಗಿ ಯುವ ಸಮಯವನ್ನು ಆಚರಿಸುವ ಮುಖೇನ ಹಕ್ಕೊತ್ತಾಯವನ್ನು ಪಡೆಯಲು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಫೆ.9 ರಂದು ವಿವಿಧ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮುಂತಾದ ಜನಸಂದಣಿ ಜಾಗಗಳಲ್ಲಿ ಹಾಡು, ಘೋಷಣೆ, ನಾಟಕ, ಕರಪತ್ರ, ಭಿತ್ತಿಪತ್ರ ಮತ್ತು ಭಾಷಣಗಳ ಮೂಲಕ ನಡೆಯುತ್ತದೆ. ಇದರ ಜತೆಗೆ ಸಾಮಾಜಿಕ ಜಾಲತಾಣ ಮೂಲಕ ಅಷ್ಟೇ ಅಲ್ಲದೆ ಜಿಲ್ಲೆಯ ಪ್ರಜ್ಞಾ ವಂತರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಅಲ್ಲಲ್ಲಿ ಈ ಕುರಿತು ಸಭೆಗಳು, ಕಾರ್ಯಾಗಾರ, ಜಾಥಾ ಮುಂತಾದ ಆಯಮಗಳಲ್ಲಿ ಯುವಾಂದೋಲನಕ್ಕೆ ದನಿಗೂಡಿಸುತ್ತಾರೆ ಎಂದು ತಿಳಿಸಿದರು.

ಫೆ.18ಕ್ಕೆ ಸಿಎಂಗೆ ಮನವಿ: ಫೆ.18 ರಂದು ಬೆಂಗಳೂರಿನಲ್ಲಿ ನಡೆಯುವ ಯುವಜನ ಹಕ್ಕಿನ ಮೇಳದಲ್ಲಿ ರಾಜ್ಯದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಸರ್ವರಿಗೂ ಸಮಪಾಲು-ಸಮಬಾಳು: ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜಿ.ಜೆ.ನಾಗರಾಜ್‌ ಮಾತ ನಾಡಿ, ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಉತ್ತಮ ವಾದ ಹಕ್ಕುಗಳನ್ನು ನೀಡಿದೆ. ಜಗತ್ತಿನ ಅತಿದೊಡ್ಡ ಮಹತ್ವಪೂರ್ಣವಾದ ಸಂವಿಧಾನ ಎಂದರೆ ಭಾರತ ಸಂವಿಧಾನ. ಈ ಸಂವಿಧಾನ ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಹಲವು ಹಕ್ಕುಗಳು, ಅಂಶಗಳು ಒಳಗೊಂಡಿದ್ದರು ಅವು ಸಕಾರಗೂಳ್ಳುವಲ್ಲಿ, ಸೋತಿರುವುದು ಸತ್ಯ. ಅಂತಹ ಸಾಲಿನಲ್ಲಿ ಯುವಜನರ ಸಮಸ್ಯೆಗಳಿಗೆ ಸವಾಲುಗಳಿಗೆ ಕನಸುಗಳಿಗೆ ನೆಲೆಯಾಗಿ ಬೆಂಬಲವಾಗಿ ಯುವಜನ ಹಕ್ಕುಗಳು ಇದ್ದರೂ ಅವು ಸಕಾರಗೊಳ್ಳುತ್ತಿಲ್ಲ ಎಂಬುದಕ್ಕೆ ಈ ಯುವಜನ ಆಯೋಗದ ಕೂಗಿನ ಯುವಾಂದೋಲನವೇ ಸಾಕ್ಷಿ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಯುವಜನ ಆಯೋಗ ಬಂದರೆ ಯುವಜನರ ವಿಕಸನಗೊಂಡು ದೇಶದ ಅಭಿವೃದ್ಧಿಗೆ ಸಹಾಯ ವಾಗುತ್ತದೆ. ಯುವರಾಷ್ಟ್ರ ಎಂಬ ಭಾರತಕ್ಕೆ ವಿಶ್ವಾದ್ಯಂತ ಇನ್ನೂ ಹೆಚ್ಚಿನ ಮನ್ನಣೆ ಸಿಗುತ್ತದೆ. ಅದರಿಂದ ಹಕ್ಕುಗಳನ್ನು ಅನುಷ್ಠಾನಗೊಳ್ಳಲು ಮಧ್ಯಸ್ಥಿಕೆಯಾಗಿ ಕೆಲಸ ಮಾಡುವ ಸರ್ಕಾರದ ವ್ಯವಸ್ಥೆಯು ನಿರ್ಮಾಣವಾಗಬೇಕು. ಕೇರಳ ರಾಜ್ಯದಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಯುವಜನ ಆಯೋಗ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಯುವ ಮುನ್ನಡೆ ಕಾರ್ಯಕರ್ತರಾದ ಅರವಿಂದ್‌, ಸುನಿತಾ, ಶಾಂತಕುಮಾರ್‌, ಮಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next