Advertisement

ಉಡುಪಿ: ಮೊದಲ ಬಾರಿ ಯುವ ವಿನಿಮಯ

10:09 AM Dec 11, 2018 | Team Udayavani |

ಉಡುಪಿ: ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ “ಏಕ್‌ ಭಾರತ್‌ಶ್ರೇಷ್ಠ ಭಾರತ್‌’ ಪರಿಕಲ್ಪನೆಯ ಅಂಗವಾಗಿ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮವನ್ನು ಉಡುಪಿಯ ಬ್ರಹ್ಮಗಿರಿ ಪ್ರಗತಿ ಸೌಧದಲ್ಲಿ ಸೋಮವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು.

Advertisement

ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲಾದ ಯುವ ವಿನಿಮಯ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಹಿಂದೆ ಕ್ರೀಡಾ ಇಲಾಖೆಯಿಂದ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿಯೇ ನನಗೆ ನಾಯಕತ್ವದ ಮಾರ್ಗದರ್ಶನ ದೊರೆಯಿತು. ಅದನ್ನು ಇಂದಿನವರೆಗೂ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಯುವ ವಿನಿಮಯ ಕಾರ್ಯಕ್ರಮದಲ್ಲಿಯೂ ಯುವಜನತೆ ತಾವು ಗಮನಿಸುವ ಉತ್ತಮ ಅಂಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಯುವಜನತೆ ಇಡೀ ದೇಶದ ಬಗ್ಗೆ ಚಿಂತಿಸುವುದಕ್ಕೂ ಅವಕಾಶ ಮಾಡಿಕೊಡುತ್ತವೆ ಎಂದು ದಿನಕರ ಬಾಬು ಕಿವಿಮಾತು ಹೇಳಿದರು.

ನೆಹರೂ ಯುವಕೇಂದ್ರದ ರಾಜ್ಯ ನಿರ್ದೇಶಕ ಸುನಿಲ್‌ ಮಲಿಕ್‌, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಾಗೇಶ್‌ ರಾಯ್ಕರ್‌, ಕಾರ್ಪೊರೇಷನ್‌ ಬ್ಯಾಂಕ್‌ ಉಡುಪಿ ವಲಯ ಉಪಮಹಾಪ್ರಬಂಧಕಿ ಡೇಲಿಯಾ ಎ. ಡಯಾಸ್‌, ರಾಷ್ಟ್ರೀಯ ಸ್ವಸಹಾಯ ಗುಂಪು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್‌, ಶ್ರೀ ಕ್ಷೇತ್ರ ಧ.ಗ್ರಾ. ಯೋಜನಾಧಿಕಾರಿ ಮಮತಾ ಭಟ್‌ ಉಪಸ್ಥಿತರಿದ್ದರು. ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫೆಡ್‌ ಸ್ವಾಗತಿಸಿದರು. ಉಪನ್ಯಾಸಕಿ ಪುರೋಭಿ ಅವರು ಕಾರ್ಯಕ್ರಮ ನಿರ್ವಹಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next