Advertisement

ಯುವ ಮಹೋತ್ಸವ ಜ್ಞಾನದೀಪ್ತಿ ಶಿಬಿರ ಸಂಪನ್ನ; ಡಾ|ಕೆ.ಬಿ.ಗುಡಸಿ

06:23 PM Jan 21, 2023 | Team Udayavani |

ನರಗುಂದ: ವಿದ್ಯಾರ್ಥಿತನ ನೀವು ನಿರ್ಧರಿಸುವ ಸಮಯವಾಗಿದೆ. ಸಿಗುವ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮಗೆ ಯಾವುದು ಖುಷಿ ಕೊಡುತ್ತದೆಯೋ ಅದನ್ನೇ ಮಾಡುವ ನಿರ್ಧಾರ ನಿಮ್ಮ ಗುರಿಯಾಗಿರಲಿ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ|ಕೆ.ಬಿ.ಗುಡಸಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಶುಕ್ರವಾರ ಸಾಯಂಕಾಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜ್ಞಾನ  ವೇದಿಕೆಯಲ್ಲಿ ಬಿಜೆಪಿ ನರಗುಂದ ಮತಕ್ಷೇತ್ರ ಹಾಗೂ ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ 3 ದಿನಗಳ ಕಾಲ ನಡೆದ ಯುವ ಮಹೋತ್ಸವ ಜ್ಞಾನದೀಪ್ತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ, ಇಲ್ಲಿ ನಿಮ್ಮ ಭವಿಷ್ಯದ ದೃಷ್ಟಿಯಿಂದ ಮೂರು ದಿನಗಳ ಉಚಿತ ತರಬೇತಿ ಶಿಬಿರ ಏರ್ಪಡಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ನಿಮ್ಮ ಭವಿಷ್ಯದ ಬಗ್ಗೆ ನೀವು ಗಂಭೀರವಾಗಿ ಚಿಂತನೆ ಮಾಡುವ ಸಂದರ್ಭವಿದು. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ನಮಗಲ್ಲ ಎಂಬ ಕೀಳರಿಮೆ ಮನಸ್ಸಿನಿಂದ ಹೊರಹಾಕಿ, ಅದರಲ್ಲೂ ನಾವು ಯಶಸ್ಸು ಸಾ ಧಿಸುತ್ತೇವೆ ಎಂಬ ಛಲ ನಿಮ್ಮ ಗುರಿಯಾಗಿರಲಿ ಎಂದು ಡಾ|ಕೆ.ಬಿ.ಗುಡಸಿ ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಕಾರ್ಯಾಗಾರ ಪ್ರಾರಂಭದಲ್ಲಿ ಇಷ್ಟು ವಿದ್ಯಾರ್ಥಿಗಳು ಸೇರುತ್ತಾರೆ ಎಂಬ ನಿರೀಕ್ಷೆ ನಮಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಿಮ್ಮ ಆಸಕ್ತಿ ಗಮನಿಸಿದಾಗ ಇಂತಹ ಇನ್ನೂ ಹಲವಾರು ತರಬೇತಿಗಳನ್ನು ನಿಮಗಾಗಿ ಆಯೋಜಿಸುವ ಉತ್ಸಾಹ ನಮಗಾಗಿದೆ. ಎಲ್ಲೋ ಒಂದು ಕಡೆಗೆ ನಮ್ಮ ಭಾಗದ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಿದ್ದೇವೆ.

ನೀವು ಭವಿಷ್ಯ ರೂಪಿಸಿಕೊಳ್ಳಲು ನಾವು ದಾರಿದೀಪ ಮಾತ್ರ ತೋರಿಸುತ್ತೇವೆ. ಅದನ್ನು ಹೇಗೆ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳುತ್ತೀರಿ ಎಂಬ ನಿರ್ಧಾರದ ಮೇಲೆ ಈ ಶಿಬಿರದ ಸಾರ್ಥಕತೆ ಅಡಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಎನ್‌.ಎಂ.ಬಿರಾದಾರ ಮಾತನಾಡಿದರು.ಎರಡನೇ ದಿನವಾದ ಗುರುವಾರ ಹಾಸ್ಯ ಭಾಷಣ ಮಾಡಿದ ವಿಜಯಲಕ್ಷ್ಮೀ ಕೊಂಗವಾಡ ವಿದ್ಯಾರ್ಥಿನಿಗೆ ವಿವಿಧ ಹಾಸ್ಯ ಪುಸ್ತಕಗಳನ್ನು ನೀಡಲಾಯಿತು.

Advertisement

ವೇದಿಕೆಯಲ್ಲಿ ಅಜ್ಜನಗೌಡ ಪಾಟೀಲ, ಎನ್‌ .ವಿ.ಮೇಟಿ, ಚಂದ್ರಶೇಖರ ದಂಡಿನ, ಜಯಪ್ರಕಾಶ ಕಂಠಿ, ಬಸು ಪಾಟೀಲ, ವಿಠಲ ಹವಾಲ್ದಾರ, ನಿರಂಜನ ಮಡಿವಾಳರ, ರಿಯಾಜ ಕೊಣ್ಣೂರ, ಶರಣು ಪಿಡ್ಡನಾಯ್ಕರ, ಸಿದ್ದೇಶ ಹೂಗಾರ, ಮಲ್ಲಪ್ಪ ಮೇಟಿ, ಮಂಜುನಾಥ ಮೆಣಸಗಿ, ಪವಾಡೆಪ್ಪ ವಡ್ಡಿಗೇರಿ, ಡಾ.ಕಿರಣ ಹೊಂಬಾಳ, ಬಿ.ಎಂ.ಮೊಕಾಶಿ, ರಾಚನಗೌಡ ಪಾಟೀಲ ಮುಂತಾದವರು ಭಾಗವಹಿಸಿದ್ದರು.

ಜ್ಞಾನದೀಪ್ತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಏರ್ಪಡಿಸಿ ಅದರಲ್ಲಿ ಉತ್ತೀರ್ಣರಾದ ಮೊದಲ ಹಂತದಲ್ಲಿ 50 ವಿದ್ಯಾರ್ಥಿಗಳಿಗೆ ಮತ್ತು ಎರಡನೇ ಹಂತದಲ್ಲಿ 100 ವಿದ್ಯಾರ್ಥಿಗಳಿಗೆ ವಿಜಯಪುರ ಚಾಣಕ್ಯ ಕರಿಯರ್‌ ಅಕಾಡೆಮಿಯಲ್ಲಿ 3 ತಿಂಗಳ ಉಚಿತ ತರಬೇತಿ ಕೊಡಿಸಲಾಗುವುದು.ಪರೀಕ್ಷೆ ದಿನಾಂಕ ಮತ್ತು ಸಮಯ ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು.
ಉಮೇಶಗೌಡ ಪಾಟೀಲ, ಲಯನ್ಸ್‌ ಕ್ಲಬ್‌ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next