ಪಣಜಿ: ನಮ್ಮ ನಾಯಕ ರಾಹುಲ್ ಗಾಂಧಿ ಅವರು ಭಾರತಕ್ಕಾಗಿ ರಕ್ತ ಸುರಿಸಿದ ಮಹಾತ್ಮ ಗಾಂಧಿಯವರೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಕೂಡ ದೇಶಕ್ಕಾಗಿ ರಕ್ತ ಹರಿಸಿದ್ದಾರೆ. ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿಯವರ ಕ್ರೂರ ಹತ್ಯೆಯಿಂದಾಗಿ ಭಾರತದ ನೆಲದಲ್ಲಿ ರಕ್ತ ಚೆಲ್ಲಿದೆ. ರಾಹುಲ್ ಗಾಂಧಿಗೂ ಭಾರತ ಮಾತೆಗೂ ರಕ್ತ ಸಂಬಂಧವಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಮುಖ್ಯಮಂತ್ರಿ ಡಾ. ರಾಹುಲ್ ಗಾಂಧಿಗೂ ಮಹಾತ್ಮ ಗಾಂಧಿಗೂ ಯಾವುದೇ ರಕ್ತ ಸಂಬಂಧವಿಲ್ಲ ಎಂದು ಪ್ರಮೋದ್ ಸಾವಂತ್ ಮಾಗಾರ್ಂವ್ ನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಯೂರಿ ಅಲೆಮಾವ್, ಭಾರತಕ್ಕಾಗಿ ತಮ್ಮ ರಕ್ತವನ್ನು ಹರಿಸಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಸಿದ್ಧಾಂತವನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಅವರು ಸಹೋದರತ್ವ ಮತ್ತು ಎಲ್ಲರನ್ನೂ ಒಳಗೊಂಡ ಭಾರತದ ಸಂದೇಶವನ್ನು ಹರಡಲು ತಮ್ಮ ಜೀವನವನ್ನು ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಅನುಸರಿಸುತ್ತಾರೆ. ರಾಹುಲ್ ಗಾಂಧಿ ಅವರು ತಮ್ಮ ತಂದೆ ರಾಜೀವ್ ಗಾಂಧಿ ಹಂತಕರ ವಿರುದ್ಧ ಸೇಡಿನ ಭಾವನೆ ಇಲ್ಲದೆ ಮಹಾತ್ಮಜಿ ಅವರ ಕರುಣೆಯ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಯೂರಿ ಅಲೆಮಾವ್ ಹೇಳಿದರು.
ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶದ ಏಕತೆಗಾಗಿ ಅವಿರತವಾಗಿ ಶ್ರಮಿಸಿದರು. ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮ ಗಾಂಧಿಯವರ ಮಾನವತಾವಾದಿ ಮೌಲ್ಯಗಳ ಅನುಯಾಯಿಗಳು ಮತ್ತು ನಾವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಜೀವನಶೈಲಿಯನ್ನು ಗೌರವಿಸುತ್ತೇವೆ. ಪ್ರತಿ ಧರ್ಮವನ್ನು ಗೌರವಿಸಲು ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ನಮಗೆ ಕಲಿಸಲಾಗುತ್ತದೆ. ನಾವು ವಿವಿಧತೆಯಲ್ಲಿ ಏಕತೆಯನ್ನು ನಂಬುತ್ತೇವೆ ಮತ್ತು ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಯೂರಿ ಅಲೆಮಾವ್ ಹೇಳಿದರು.