Advertisement

ಯುಪಿಯಲ್ಲಿ ನಡೆದಿದೆ “ವೋಟಿಗಾಗಿ ನೋಟು’

03:50 AM Mar 18, 2017 | Team Udayavani |

ಹೊಸದಿಲ್ಲಿ: ದೇಶದ ಅತಿ­ದೊಡ್ಡ ರಾಜ್ಯ ಉತ್ತರ ಪ್ರದೇಶ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು­ಕೊಂ­ಡಿದ್ದ ಪ್ರಮುಖ ಪಕ್ಷಗಳು ಮೊನ್ನೆ ಮೊನ್ನೆಯಷ್ಟೇ ಅಂತ್ಯ­ಗೊಂಡಿರುವ ವಿಧಾನಸಭೆ ಚುನಾವಣೆಯಲ್ಲಿ ಕೋಟ್ಯಂ­ತರ ಹಣ ಸುರಿದಿರುವುದು ಸ್ಪಷ್ಟ ಎಂದು ಅಧ್ಯಯನವೊಂದರ ವರದಿ ಹೇಳುತ್ತಿದೆ. ಚುನಾವಣೋತ್ತರ ಸಮೀಕ್ಷೆ ನಡೆಸಿರುವ ಸಿಎಂಎಸ್‌ ಸಂಸ್ಥೆ, ಚುನಾವಣಾ ಕಣದಲ್ಲಿದ್ದ ಪ್ರಮುಖ ಪಕ್ಷಗಳು ಹೆಚ್ಚಾಕಡಿಮೆ 5,500 ಕೋಟಿ ರೂ. ಖರ್ಚು ಮಾಡಿವೆ. ಇದರಲ್ಲಿ ಸಾವಿರ ಕೋಟಿ ರೂ.ನಷ್ಟು “ವೋಟಿಗಾಗಿ ನೋಟು’ ನಡೆದಿದೆ. ಮತದಾನ ಮಾಡಿರುವವರ ಪೈಕಿ ಮೂರರಲ್ಲಿ ಒಂದು ಭಾಗ ಹಣ ಮತ್ತು ಹೆಂಡಕ್ಕಾಗಿಯೇ ಮತ ಚಲಾಯಿಸಿದ್ದಾರೆ ಎಂದು ಹೇಳಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next