Advertisement
ಪೌಲಿ ವಿರುದ್ಧ ನಡೆದ ರವಿವಾರ ರಾತ್ರಿಯ ಸೆಣಸಾಟದಲ್ಲಿ ಅರ್ಹತಾ ಆಟಗಾರ, ವಿಶ್ವ ರ್‍ಯಾಂಕಿಂಗ್‌ನಲ್ಲಿ 110ರಷ್ಟು ಕೆಳ ಸ್ಥಾನದಲ್ಲಿರುವ ಯೂಕಿ ಭಾಂಬ್ರಿ 6-4, 6-4 ಅಂತರದ ನೇರ ಸೆಟ್‌ಗಳ ಜಯ ಒಲಿಸಿಕೊಂಡರು. ಕೇವಲ ಒಂದು ಗಂಟೆ, 19 ನಿಮಿಷಗಳಲ್ಲಿ ಭಾಂಬ್ರಿ ವಿಜಯೋತ್ಸವ ಆಚರಿಸಿದರು. ಇದು ಭಾಂಬ್ರಿ-ಪೌಲಿ ನಡುವಿನ ಮೊದಲ ಮುಖಾಮುಖೀಯಾಗಿತ್ತು. ಈ ಜಯಕ್ಕಾಗಿ ಯೂಕಿ ಭಾಂಬ್ರಿಗೆ 45 ರ್‍ಯಾಂಕಿಂಗ್ ಅಂಕಗಳ ಜತೆಗೆ 47,170 ಡಾಲರ್ ಬಹುಮಾನ ಖಾತ್ರಿಯಾಗಿದೆ. ಭಾಂಬ್ರಿ ಅವರಿನ್ನು ಅಮೆರಿಕದ ಬಿಗ್ ಸರ್ವರ್ ಖ್ಯಾತಿಯ ಸ್ಯಾಮ್ ಕ್ವೆರ್ರಿ ಸವಾಲನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಎಡ್ವರ್ಡ್ ರೋಜರ್ ವೆಸಲಿನ್ ಜತೆಗೂಡಿ ಕಣಕ್ಕಿಳಿದಿದ್ದ ರೋಹನ್ ಬೋಪಣ್ಣ ಭಾರೀ ಹೋರಾಟ ನೀಡಿಯೂ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಗಿಲ್ಲೆಸ್ ಮುಲ್ಲರ್-ಸ್ಯಾಮ್ ಕ್ವೆರ್ರಿ ಜೋಡಿ ಈ ಪಂದ್ಯವನ್ನು 5-7, 6-2, 10-4 ಅಂತರದಿಂದ ಜಯಿಸಿದೆ. ಮೊದಲ ಪಂದ್ಯದಲ್ಲೇ ಎಡವಿದ ಜ್ವೆರೇವ್
ಇಂಡಿಯನ್ ವೆಲ್ಸ್ ಪುರುಷರ ಸಿಂಗಲ್ಸ್ ಸ್ಪರ್ಧೆಯ ಮೊದಲ ಪಂದ್ಯ ದಲ್ಲೇ ವಿಶ್ವದ ನಂ.5 ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಸೋಲುಂಡಿದ್ದಾರೆ. ಅವರನ್ನು ಪೋರ್ಚುಗಲ್‌ನ ಜೋ ಸೂಸ 7-5, 5-7, 6-4 ಅಂತರದಿಂದ ಪರಾಭವಗೊಳಿ ಸಿದರು.