ಆಂಧ್ರಪ್ರದೇಶ: ತೆಲಂಗಾಣದ ಪಾಲಕುರ್ತಿಯಲ್ಲಿ ಸ್ಥಾಪಿಸಲಾಗಿದ್ದ ಆಂಧ್ರ ಪ್ರದೇಶ ಮಾಜಿ ಸಿಎಂ ಯೆಡುಗುರಿ ಸಂದಿಂತಿ ರಾಜಶೇಖರ ರೆಡ್ಡಿ (ವೈಎಸ್‌ಆರ್) ಅವರ ಪ್ರತಿಮೆಯನ್ನು ಬುಧವಾರ ಬೆಳಗ್ಗೆ ಬಿಆರ್‌ಎಸ್ ಕಾರ್ಯಕರ್ತರು ಕೆಡವಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಯುವಜನ ಶ್ರಮಿಕ ರೈತು ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಇದೊಂದು ಅನಾಗರಿಕ ಕೃತ್ಯ ಎಂದು ದೂರಿದ ಅವರು ನಾನು ಆರಂಭಿಸಿದ ಪಾದಯಾತ್ರೆಯನ್ನು ಸಹಿಸದ ಭಾರತೀಯ ರಾಷ್ಟ್ರೀಯ ಸಮಿತಿ ಕಾರ್ಯಕರ್ತರು ವೈಆರ್ ಎಸ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ವೈಆರ್ ಎಸ್ ಪ್ರತಿಮೆ ಸ್ಥಾಪಿಸಿದಾಗಿನಿಂದ ಬಿಆರ್‌ಎಸ್ ಕಾರ್ಯಕರ್ತರು ಅದನ್ನು ಕೆಡಹಲು ಸಾಕಷ್ಟು ಹುನ್ನಾರ ನಡೆಸಿದ್ದಾರೆ ಆದರೆ ಕೊನೆಗೆ ನನ್ನ ಪಾದಯಾತ್ರೆಯನ್ನು ಸಹಿಸಿಕೊಳ್ಳದೆ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮ್ ರಹೀಮ್ ಸಿಂಗ್ ಗೆ ಪೆರೋಲ್: ಸಮರ್ಥಿಸಿಕೊಂಡ ಹರಿಯಾಣ ಸರಕಾರ