ಹೈದರಾಬಾದ್: ಆಂಧ್ರದಲ್ಲಿ ನಡೆಯುತ್ತಿರುವ ಹಿಂಸಾಚಾರ ಫೋಟೋಗಳನ್ನು ಮಾಜಿ ಸಿಎಂ ಜಗನ್‌ಮೋಹನ್ ರೆಡ್ಡಿ ದಿಲ್ಲಿಯಲ್ಲಿ ಪ್ರದರ್ಶಿಸಿ, ಪ್ರತಿಭಟಿಸಿ ದ್ದರು. ಇದಕ್ಕೆ ತಿರುಗೇಟು ನೀಡಿರುವ ಆಂಧ್ರ ಸಿಎಂ ನಾಯ್ಡು, ಕೊಲಂಬಿಯಾದ ಡ್ರಗ್ ದೊರೆ ಪ್ಯಾಬ್ಲೋ ಎಸ್ಕೋ ಬಾರ್‌ಗೆ ಜಗನ್‌ರನ್ನು ಹೋಲಿಸಿದ್ದಾರೆ! ಮೊದಲು ಮಾದಕ ವಸ್ತುಗಳ ಉಗ್ರನಾಗಿದ್ದ ಪ್ಯಾಬ್ಲೋ ರಾಜಕಾರಣಿಯಾದ. ಬಳಿಕ ಮಾದಕವಸ್ತು ಮಾರಾಟ ಮಾಡಲಾರಂಭಿಸಿದ. 5 ವರ್ಷದಲ್ಲಿ ಆಂಧ್ರ ಮಾದಕ ವಸ್ತುಗಳ ರಾಜಧಾನಿಯಾಗಿದೆ. ಇದರಲ್ಲಿ ಜಗನ್ ಪಾತ್ರ ದೊಡ್ಡದಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಥಳಿತ ಕೇಸ್ ಜಟಾಪಟಿ
ಅಮರಾವತಿ: ಆಂಧ್ರಪ್ರದೇಶದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಜೂನಿಯರ್ ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಹೊಡೆದಿರುವ ನರಸರಾವ್‌ಪೇಟೆಯಲ್ಲಿ ನಡೆದಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಒಬ್ಬನ್ನು ಬಂಧಿಸಲಾಗಿದೆ. ಇನ್ನೂ ಐವರಿಗಾಗಿ ಶೋಧ ನಡೆದಿದೆ. ಥಳಿತ ಪ್ರಕರಣ ಫೆಬ್ರವರಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಸಿಸಿ ಸೋಗಿನಲ್ಲಿ ಸೀನಿಯರ್ಸ್ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಈಗ ರಾಜಕೀಯ ತಿರುವು ಪಡೆದಿದ್ದು, ಆಂಧ್ರದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಲ್ಲ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ವಿಪಕ್ಷ ವೈಆರ್‌ಸಿಪಿ ಟೀಕಿಸಿದೆ. ಅದಕ್ಕೆ ತಿರುಗೇಟು ನೀಡಿದ ಗೃಹ ಸಚಿವೆ ಅನಿತಾ ವಂಗ ಲಪುಡಿ “ಜಗನ್‌ರೆಡ್ಡಿ ಆಡಳಿತದಲ್ಲಿ ಈ ಘಟನೆ ನಡೆದಿದೆ. ನಮ್ಮ ಸರಕಾರ ಬಂದದ್ದೇ ಜೂನ್‌ನಲ್ಲಿ’ ಎಂದಿದ್ದಾರೆ.