Advertisement
ಪದ್ದು ಡಿಯರ್,ಹೌದು. ಮತ್ತೆ ನಾನೇ ಬರೀತಿದೀನಿ. ಇವತ್ತಲ್ಲ, ಇನ್ನೂ ಐದಾರು ದಿನ ನೀನು ನಂಜೊತೆ ಮಾತಾಡಲ್ಲ. ಫೋನ್ ಮಾಡಲ್ಲ. ಮೇಲ್ ಕಳ್ಸೊಲ್ಲ. ಮುದ್‌ಮುದ್ದಾಗಿ ನಗಲ್ಲ. ಸುಮುಮ್ನೆ ರೇಗಲ್ಲ. ಮಿಸ್ ಕಾಲ್ ಕೊಟ್ಟು ಕಾಡಲ್ಲ. ಸದ್ದಿಲ್ಲದೆ ಮುತ್ತಿಟ್ಟು ಸಾರಿ ಕೇಳಲ್ಲ. ನಮ್ಮಮ್ಮಂಗೆ ಗೊತ್ತಾಗದ ಹಾಗೆ ಮಲ್ಲಿಗೆ ಹೂ ತಂದುಕೊಡಲ್ಲ. ಅಸಲಿಗೆ ನೀನು ಒಂದಿಡೀ ವಾರ ನಮ್ಮ ಮನೆಗೆ ಬರೋದೇ ಇಲ್ಲ. ಇಷ್ಟೆಲ್ಲ ಗೊತ್ತಿರೋದ್ರಿಂದಲೇ ನಾನೇ ಬರೀತಿದೀನಿ. ಸಾರಿ ಪದ್ದೂ, ಸಾರಿ.
Related Articles
Advertisement
ಮೂಲೇಲಿ ಕೂರೋಣ ಅಂದೆಯಲ್ಲ, ಅದಕ್ಕೂ ನನ್ನ ತಕರಾರು ಇರಲಿಲ್ಲ. ಆದ್ರೆ ಸಿನಿಮಾ ಶುರುವಾದದ್ದೇ ತಡ, ನಿನ್ನ ತುಂಟಾಟ ಶುರುವಾಯಿತು. ನಾನು ಮೌನವಾಗಿದ್ದಷ್ಟೂ ನಿನ್ನ ತರ್ಲೆತನ ಹೆಚ್ಚುತ್ತಲೇ ಹೋಯಿತು. ಹೋಗಲಿ ಅಂತ ಅದನ್ನೆಲ್ಲ ಸಹಿಸಿಕೊಂಡರೆ- ಸಿನಿಮಾ ಮುಗಿದದ್ದೇ ತಡ, ಲಾಲ್‌ಭಾಗ್ ಕಡೆಗೆ ಬೈಕು ತಿರುಗಿಸಿದೆಯಲ್ಲ, ಅಲ್ಲಾದ್ರೂ ಗಂಭೀರವಾಗಿ ಇರಬಾರ್ದಾ ನೀನು ? ಶುದ್ಧ ರೋಡ್ ರೋಮಿಯೋ ಥರಾ ಆಡಿಬಿಟ್ಟೆ..
ಸ್ಟುಪಿಡ್, ನಂಗೆ ವಿಪರೀತ ಸಿಟ್ಟು ಬಂದದ್ದೇ ಆಗ. ಮೊದಲೇ ಹೇಳಿದ್ದೆನಲ್ಲ- ಸಿಟ್ಟು ಬಂದಾಗ ನಂಗೆ ಕಂಟ್ರೋಲ್ ಮಾಡಿಕೊಳ್ಳಲು ಆಗಲ್ಲ. ಅಂಥ ಸಂದರ್ಭದಲ್ಲೆಲ್ಲ ಮುಲಾಜಿಲ್ಲದೆ ಬೈದು ಬಿಡ್ತೇನೆ. ಪ್ರಾಮಿಸ್, ನನಗೆ ನಾಟಕ ಆಡೋಕೆ ಬರಲ್ಲ. ಮನಸ್ಸಿಗೆ ಬೇಸರ ಆಗಿದ್ರೂ ತೋರಿಕೆಯ ಮುಖವಾಡ ಧರಿಸಿ ನಗುತ್ತಾ ಮಾತಾಡೋಕೂ ಬರಲ್ಲ. ಗಂಭೀರವಾಗಿ ಇದ್ದಾಗ ನಮ್ಮ ವ್ಯಕ್ತಿತ್ವಕ್ಕೆ ಒಂದು ಮೆರುಗು ಬರುತ್ತೆ.
ಅಂಥದೊಂದು ಡಿಗ್ನಿಫೈಡ್ ಭಾವವನ್ನು ನಾನು ಯಾವತ್ತೂ ಇಷ್ಟಪಡ್ತೇನೆ. ಎಲ್ಲಿ ಏನು ತಪ್ಪಾಗಿದೆ ಅಂತ ನೀನು ಈಗಾದ್ರೂ ಅರ್ಥ ಮಾಡಿಕೊಂಡ್ರೆ ಸಾಕು, ನನಗೆ ಅಷ್ಟೇ ಸಾಕು. ಈ ಪತ್ರ ಓದಿದ ನಂತರ ಒಂದ್ಸಲ ಮಾತಾಡ್ಬೇಕು, ಇನ್ನೊಂದ್ಸಲ ಲೈಟಾಗಿ ಜಗಳ ಮಾಡ್ಬೇಕು. ಅವಳಿಗೆ ಆವಾಜ್ ಹಾಕೆಕು ಅಂತೆಲ್ಲಾ ನಿನಗೆ ಅನಿಸಿರುತ್ತೆ. ಸಂಕೋಚ ಯಾಕೆ? ಕಾಲ್ ಮಾಡು….ನೀನೇ ಕರೆದಂತೆ
ಅತ್ತೆ ಮಗಳು !