Advertisement
ಮಹಾರಾಷ್ಟ್ರದ ಔರಂಗಾಬಾದ್ ನ 16 ವರ್ಷದ ಬಾಲಕಿ ಕಾವ್ಯ ʼಬಿಂದಾಸ್ ಕಾವ್ಯʼ ಎಂಬ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದಾರೆ. ಸುಮಾರು 4 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ಸ್ ಹೊಂದಿರುವ ಚಾನೆಲ್ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಾವ್ಯ ಅವರ ಅಮ್ಮ ಈ ಚಾನೆಲ್ ನ್ನು ನೋಡಿಕೊಳ್ಳುತ್ತಾರೆ. ಕಾವ್ಯಾ ಚಾನೆಲ್ ನ ಮುಖ್ಯ ಮುಖ. ಪ್ರತಿ ವಿಡಿಯೋದಲ್ಲಿ ಕಾವ್ಯ ಆಡುವ ಮಾತು – ಹಂಚಿಕೊಳ್ಳುವ ವಿಷಯ, ವಿಶೇಷಗಳಿಂದ ʼಬಿಂದಾಸ್ ಕಾವ್ಯʼ ಯೂಟ್ಯೂಬ್ ಚಾನೆಲ್ ಖ್ಯಾತಿಯನ್ನು ಪಡೆದುಕೊಂಡಿದೆ.
Related Articles
Advertisement
ಔರಂಗಾಬಾದ್ ಪೊಲೀಸರು, ಕಾವ್ಯಳ ಫೋಟೋವನ್ನು ರೈಲ್ವೆ ಪೊಲೀಸರಿಗೆ ರವಾನಿಸಿದ್ದಾರೆ. ಕೂಡಲೇ ಪೊಲೀಸರು ಮಹಾರಾಷ್ಟ್ರದಿಂದ 500 ಕಿ.ಮಿ ದೂರದಲ್ಲಿರುವ ಇಟ್ರಾರ್ಸಿ ರೈಲ್ವೆ ನಿಲ್ದಾಣದ ರೈಲುಗಳಲ್ಲಿ ಹುಡುಕಾಡಿದ್ದಾರೆ. ಭುಸಾವಲ್ ನಿಂದ ಬರುವ ಖುಷಿ ನಗರ್ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಕೋಚ್ ನಲ್ಲಿ ಕಾವ್ಯ ಪತ್ತೆ ಆಗಿದ್ದು, ಪೊಲೀಸರು ಔರಂಗಾಬಾದ್ ಪೊಲೀಸರಿಗೆ ಹಾಗೂ ಪೋಷಕರಿಗೆ ಮಾಹಿತಿ ಕೊಟ್ಟಿದ್ದಾರೆ.
ಕಾವ್ಯ ಸಿಕ್ಕಿದ್ದಾಳೆ ಎನ್ನುವ ವಿಷಯ ತಿಳಿದ ಪೋಷಕರು ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡಿ, ಕಾವ್ಯ ಪತ್ತೆಯಾಗಿದ್ದಾಳೆ. ಲಕ್ನೋನ ನಮ್ಮ ಹಳ್ಳಿಗೆ ಹೋಗುತ್ತಿದ್ದಳು. ಪೊಲೀಸರಿಗೆ ಹಾಗೂ ಮಾನಸಿಕವಾಗಿ ಧೈರ್ಯ ತುಂಬಿದ ಯೂಟ್ಯೂಬರ್ ವೀಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ವಿಡಿಯೋ ಕೂಡ ʼಬಿಂದಾಸ್ ಕಾವ್ಯʼ ಚಾನೆಲ್ ನಲ್ಲಿ 4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಪೊಲೀಸರು ಕಾವ್ಯಳನ್ನು ತಂದೆ – ತಾಯಿಗೆ ಒಪ್ಪಿಸಿದ್ದಾರೆ.