ವಾಷಿಂಗ್ಟನ್: ವಿಮಾನ ಅಪಘಾತ ಭಯಾನಕವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ವಾಯುಯಾನ ಉದ್ಯಮಕ್ಕೆ ಸಂಬಂಧಿಸಿದಂತೆ ಸರ್ಕಾರ ಇಂತಹ ದುರಂತಗಳನ್ನು ತಪ್ಪಿಸಲು ಹಲವಾರು ಮಾರ್ಗಸೂಚಿಗಳ ಮೂಲಕ ಪರಿಶೀಲನೆ ನಡೆಸುತ್ತಿರುತ್ತದೆ. ಆದಾಗ್ಯೂ ಯೂಟ್ಯೂಬರ್ ತನ್ನ ಫಾಲೋವರ್ಸ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ತನ್ನ ಸಿಂಗಲ್ ಎಂಜಿನ್ ವಿಮಾನವನ್ನು ಪತನಗೊಳಿಸಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಇದಕ್ಕಾಗಿ ಆತ ಇದೀಗ ಜೈಲುಕಂಬಿ ಎಣಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಟ್ರಾಫಿಕ್‌ನಲ್ಲಿ ಸಿಲುಕಿದ್ದ ಅಮಿತಾಭ್‌ರನ್ನು ಬೈಕ್ ನಲ್ಲಿ ಡ್ರಾಪ್ ಕೊಟ್ಟ ಅಭಿಮಾನಿ
ಉದ್ದೇಶಪೂರ್ವಕವಾಗಿ ವಿಮಾನವನ್ನು ಕ್ರ್ಯಾಶ್ ಮಾಡಿರುವ ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ 29 ವರ್ಷದ ಯೂಟ್ಯೂಬರ್ ಟ್ರೆವರ್ ಜಾಕೋಬ್ 20 ವರ್ಷಗಳ ಕಾಲ ಜೈಲುಶಿಕ್ಷೆ ಎದುರಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಜಾಕೋಬ್ ಶೇರ್ ಮಾಡಿರುವ ವಿಡಿಯೋದಲ್ಲಿ, ಜಾಕೋಬ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಡಿಕ್ಕಿಹೊಡೆಸುವ ಮುನ್ನ ಪ್ಯಾರಾಚೂಟ್ ಬಳಸಿ ಕೆಳಗೆ ಧುಮುಕಿರುವುದು ಸೆರೆಯಾಗಿದೆ.
ತನಿಖೆಯ ವೇಳೆ ಜಾಕೋಬ್ ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದಾಗಿ ತಿಳಿಸಿದ್ದು, ತಾನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿಲ್ಲ ಎಂದಿದ್ದ. ಆದರೆ ಘಟನೆ ಬಗ್ಗೆ ವಾಯುಯಾನ ತಜ್ಞರು ತನಿಖೆ ನಡೆಸಿದಾಗ, ಸತ್ಯ ಬಯಲಾಗಿತ್ತು ಎಂದು ವರದಿ ವಿವರಿಸಿದೆ.