ನವದೆಹಲಿ: ಆನ್ ಲೈನ್ ಜನಪ್ರಿಯ ವಿಡಿಯೋ ಹಂಚಿಕೆ ತಾಣವಾದ ಯೂಟ್ಯೂಬ್ ಹಾಗೂ ಗೂಗಲ್ ನ ಉಚಿತ ಜಿ ಮೇಲ್ ಸೇವೆ ಸೋಮವಾರ ಮಧ್ಯಾಹ್ನ ಜಾಗತಿಕವಾಗಿ ಬಳಕೆದಾರರಿಗೆ ವ್ಯತ್ಯವಾಗಿದ್ದು (ಕ್ರ್ಯಾಶ್), ಇದರ ಪರಿಣಾಮ ನೆಟಿಜೆನ್ಸ್ ಮೆಮೇಸ್ ಮೂಲಕ ತಮ್ಮ ಟೀಕೆಯನ್ನು ಹೊರಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಗೂಗಲ್ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಗೂಗಲ್ ಕಾಂಟ್ಯಾಕ್ಟ್ಸ್, ಡಾಕ್ಸ್, ಗೂಗಲ್ ಡ್ರೈವ್, ಜಿ ಮೇಲ್ ಯೂಟ್ಯೂಬ್ ಸೇವೆ ಕ್ರ್ಯಾಶ್ ಆಗಿತ್ತು. ಜಿ ಮೇಲ್, ಯೂಟ್ಯೂಬ್ ತೆರೆದಾಗ “ ಇದರ ಕಾರ್ಯ ಪ್ರಸ್ತುತ ಸ್ಥಗಿತಗೊಂಡಿದೆ” ಎಂಬ ಸಂದೇಶ ಕಾಣಿಸಿಕೊಂಡಿತ್ತು.
ಕಳೆದ ತಿಂಗಳು (ನವೆಂಬರ್) ಕೂಡಾ ಯೂಟ್ಯೂಬ್ ಸುಮಾರು ಎರಡು ಗಂಟೆಗಳ ಕಾಲ ಕ್ರ್ಯಾಶ್ ಆಗುವ ಮೂಲಕ ಭಾರೀ ಟೀಕೆಗೆ ಒಳಗಾಗಿತ್ತು. ಇದೀಗ ಯೂಟ್ಯೂಬ್ ಮತ್ತೆ ಅದೇ ಸಮಸ್ಯೆಗೆ ಗುರಿಯಾಗಿದೆ ಎಂದು ವರದಿ ತಿಳಿಸಿದೆ. ಇದೀಗ ಎಂದಿನಂತೆ ಯೂಟ್ಯೂಬ್, ಜಿ ಮೇಲ್ ಕಾರ್ಯನಿರ್ವಹಿಸುತ್ತಿದೆ.
ಜಿ ಮೇಲ್, ಯೂಟ್ಯೂಬ್ ಕ್ರ್ಯಾಶ್ ನಿಂದ ನೆಟಿಜೆನ್ಸ್ ಗಳ ಮೆಮೇಸ್ ಇಲ್ಲಿದೆ…