Advertisement

ಹಡಿಲು ಬಿದ್ದ ಗದ್ದೆ ನಾಟಿ ಮಾಡಿದ ಯುವಕರು

09:23 PM Jul 15, 2019 | Sriram |

ಕಟಪಾಡಿ: ಮಣಿಪುರ ವೆಸ್ಟ್‌ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಶ್ರೀ ಅದಮಾರು ಮಠದ ರಸ್ತೆಯ ಪಕ್ಕದಲ್ಲಿರುವ ಹಡಿಲು ಬಿದ್ದಿದ್ದ ತಾಳಿಬಳ್ಳಿ ಗದ್ದೆಯಲ್ಲಿ ಭತ್ತದ ಸಸಿ (ನೇಜಿ) ನಾಟಿ ಕಾರ್ಯಕ್ರಮವು ಜು.14ರಂದು ನಡೆಯಿತು.

Advertisement

ಚಿತ್ರನಟ, ನಿರ್ಮಾಪಕ ಸೂರ್ಯೋ ದಯ ಪೆರಂಪಳ್ಳಿ ಈ ಬಗ್ಗೆ ಪ್ರತಿಕ್ರಿಯಿಸಿ, ಎಳೆಯರನ್ನೂ ಕೂಡಿಕೊಂಡು ಧಾರ್ಮಿಕ ಸಂಘಟನೆಯು ತಮ್ಮ ಬಳಕೆಯ ಅನಂತರದಲ್ಲಿ ಹಡೀಲು ಬಿದ್ದಿರುವ ಗದ್ದೆಯನ್ನು ಬಳಸಿಕೊಂಡು ನೇಜಿ ನಾಟಿ ನಡೆಸುತ್ತಿರುವುದು ತುಳುನಾಡಿನ ಹೆಮ್ಮೆ. ಆ ಮೂಲಕ ಸಮಗ್ರವಾಗಿ ಬೇಸಾಯದ ಗದ್ದೆಯೊಡನೆ ಬಾಂಧವ್ಯವನ್ನು ಬೆಸೆಯುವ ಕೆಲಸ ಇಲ್ಲಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.

ಈ ಸಂದರ್ಭ ಮಣಿಪುರ ವೆಸ್ಟ್‌ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶೇಖರ್‌ ಕಲ್ಮಂಜೆ, ಕಾರ್ಯದರ್ಶಿ ಶ್ರೀಕಾಂತ್‌ ಸನಿಲ್‌, ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಸೇರಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next