ಯಾದಗಿರಿ: ನಾಗರ ಪಂಚಮಿ ಬಂತೆಂದರೆ ಸಾಕು, ಇಲ್ಲಿನ ಗ್ರಾಮೀಣ ಭಾಗದಲ್ಲಿ ಸಾಹಸಗಳು ಮರೆಯುವ ಜಿದ್ದು ಕಟ್ಟಿ ಯುವಕರನ್ನು ಪ್ರೋತ್ಸಾಹಿಸುವ ಕೆಲಸಗಳು ಸಾಮಾನ್ಯ.
ಜಿಲ್ಲೆಯ ಶಹಾಪುರ ತಾಲೂಕಿನ ಬಲಕಲ್ ಗ್ರಾಮದಿಂದ 17 ಕಿ.ಮೀ ದೂರದ ಯಾದಗಿರಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಕ್ಕೆ ನಾಲ್ಕುವರೆ ಕ್ವಿಂಟಾಲ್ ಜೋಳ ಹೊತ್ತ ಎತ್ತಿನ ಗಾಡಿಯನ್ನು ಕೈಗಳು ಮೂಲಕ ನಾಲ್ಕುವರೆ ತಾಸಿಯಲ್ಲಿ ಎಳೆಯುವ ಪಂದ್ಯ ಆಯೋಜಿಸಲಾಗಿತ್ತು.
ಪಂದ್ಯದಲ್ಲಿ ಗೆದ್ದರೆ ಸ್ಥಳದಲ್ಲಿಯೇ 15 ಸಾವಿರ ರೂಪಾಯಿ ನಗದು ಬಹುಮಾನವನ್ನು ಸಹ ನೀಡುವ ಮಾತಾಗಿತ್ತು.
ಸಾಹಸದ ಕಾರ್ಯಕ್ಕೆ ಗ್ರಾಮದ ರಮೇಶ ನಿಂಗಪ್ಪ ಕಂದಳ್ಳಿ ಮತ್ತು ರಮೇಶ ಧರ್ಮಣ್ಣ ಪೂಜಾರಿ ಎನ್ನುವ ಯುವಕರು, ನಾಲ್ಕುವರೆ ಕ್ವಿಂಟಾಲ ಜೋಳ ಹೊತ್ತ ಎತ್ತಿನ ಬಂಡಿಯನ್ನು ಕೇವಲ ಎರಡು ಗಂಟೆ ನಲವತ್ತು ನಿಮಿಷದಲ್ಲಿ 17 ಕಿ.ಮೀ ಎಳೆದು ತರುವಲ್ಲಿ ಯಶಸ್ವಿಯಾಗಿದ್ದು, ಯುವಕರ ಸಾಧನೆಗೆ ಗ್ರಾಮದ ಜನರು ಪ್ರಶಂಸೆ ವ್ಯಕ್ತಪಡಿದ್ದಾರೆ.
ಯುವಕರು ಸಾಹಸ ಮಾಡಿದ್ದು ಎಲ್ಲಿಯೂ ನಿಲ್ಲದೇ ಎರಡುವರೆ ಗಂಟೆಯಲ್ಲಿ ಗುರಿಯನ್ನು ತಲುಪಿದ್ದು ಇದು ಮಾಮೂಲಿ ಮಾತಲ್ಲ ಎಂದು ಗ್ರಾಮದ ಹಿರಿಯರು ಯುವಕರಿಗೆ ಅಭಿನಂದಿಸಿದ್ದಾರೆ.
ಪಂದ್ಯ ಗೆದ್ದ ಯುವಕರಿಗೆ ಸ್ಥಳದಲ್ಲಿಯೇ 15 ಸಾವಿರ ಬಹುಮಾನವನ್ನು ವಿತರಿಸಿ, ಶಾಂತಗೌಡ ಕುರಕುಂದಿ, ಬಸವರಾಜಪ್ಪ ಗೌಡ ಬೀರಾದರ, ದೇವಪ್ಪ ಜಿಂಗಿ, ಸಾಬಣ್ಣ, ಹುಲಿಯಪ್ಪ, ರಮೇಶ, ನಿಂಗಪ್ಪ ವಿಜೇತ ಯುವಕರನ್ನು ಸನ್ಮಾನಿಸಿದರು.