ದೇವನಹಳ್ಳಿ: ಪಟ್ಟಣದ ಹೊಸಕುರುಬರಕುಂಟೆ ರಸ್ತೆಯಲ್ಲಿರುವ ಎಸ್.ಎಲ್.ಎಸ್.ಸ್ಕೂಲ್ ಆಫ್‚ ಮಾಡರ್ನ್ ವಿಸ್ಡಮ್ ಶಾಲೆಯಲ್ಲಿ ಗಡಿ ಭದ್ರತಾ ಪಡೆಯ ವತಿಯಿಂದ ಸೇನೆಗೆ ಸೇರಲು ಕಾರ್ಯಾಗಾರ ನಡೆಯಿತು. ಸಿ.ಐ.ಎ.ಟಿ. ಅಸಿಸ್ಟೆಂಟ್ ಕಮ್ಯಾಂಡರ್ ಉದಯ್ ಕೃಷ್ಣ ಮಾತನಾಡಿ, ಸೇನೆಯಲ್ಲಿ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದು, ಅವುಗಳ ಕಾರ್ಯದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು. ಸೇನೆಯಲ್ಲಿ ಬಳಸುತ್ತಿರುವ ಯುದ್ಧ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಪ್ರಾತ್ಯಕ್ಷಿಕವಾಗಿ ಮನವರಿಕೆ ಮಾಡಿದರು.
ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ತರಬೇತಿ ಹಾಗೂ ಕಾರ್ಯಾಗಾರದಲ್ಲಿ ಭಾಗಿಯಾಗಿ ಬಹಳ ಉತ್ಸಾಹದಿಂದ ಮಾಹಿತಿ ಪಡೆದರು, ಶಾಲೆಯ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಯುವಪೀಳಿಗೆ ಸೇನೆ ಸೇರಲು ಮುಂದಾಗಬೇಕು. ಚಳಿಗಾಳಿ ಎನ್ನದೆ ರಾತ್ರಿ ಹಗಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗಡಿಗಳಲ್ಲಿ ಕಾಯುತ್ತಿದ್ದಾರೆ ಎಂದರು. ಗಡಿ ಭದ್ರತಾ ಪಡೆಗೆ ಸೇರಲು ಮಕ್ಕಳು ಯಾವ ವಿದ್ಯಾರ್ಹತೆಯನ್ನು ಪಡೆಯಬೇಕು. ತರಬೇತಿ ಹೇಗಿರುತ್ತದೆ.
ದೇಹವನ್ನು ಯಾವ ರೀತಿ ಇಟ್ಟುಕೊಳ್ಳಬೇಕು. ಎತ್ತರ, ತೂಕ ಎಷ್ಟಿರಬೇಕು ಎಂಬುದರ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರದ ಮೂಲಕ ತಿಳಿಸಿಕೊಡಲಾಗಿದೆ ಎಂದು ತಿಳಿಸಿದರು.
ಅನ್ನ ನೀಡಲು ರೈತರು ಶ್ರಮ: ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಡಿ.ಎಸ್.ಧನಂಜಯ ಮಾತನಾಡಿ, ರೈತರು ನಮಗೆ ಅನ್ನ ನೀಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ದೇಶದ ಬೆನ್ನೆಲುಬು ರೈತ ಹಾಗೂ ಯೋಧ ಎಂಬುದನ್ನು ಮರೆಯಬಾರದು. ದೇಶವನ್ನು ಕಾಪಾಡುವ
ಭದ್ರತಾ ಪಡೆಗಳಿಗೆ ಸೇರಲು ಹುರಿದುಂಬಿಸುವ ಮತ್ತು ದೇಶಪ್ರೇಮವನ್ನು ಬೆಳೆಸುವ ಕಾರ್ಯಾಗಾರವಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ದೇಶವನ್ನು ಕಾಪಾಡಲು ಸೈನಿಕರು ತಮ್ಮ ಧೈರ್ಯ, ಸಾಹಸದಿಂದ ಗಡಿಗಳಲ್ಲಿ ಚಳಿ ಮಳೆಯನ್ನದೇ ಕೆಲಸ ಮಾಡುತ್ತಿರುತ್ತಾರೆ ಎಂದು ಹೇಳಿದರು. ಗಡಿ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಉತ್ತಮ್ ಅಗ್ನಿಹೋತ್ರಿ, ಸೇನೆಯ 30 ಸಿಬ್ಬಂದಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಧನಂಜಯ್, ಸಹಶಿಕ್ಷಕರು, ಸಿಬ್ಬಂದಿ ಇದ್ದರು.