Advertisement
ಲಾಕ್‍ಡೌನ್ ಘೋಷಣೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಸಮುದಾಯದ ಯುವಕರ ಬಳಗ ನಿರಂತರ ಅನ್ನಸಂತರ್ಪಣೆ ಸೇವೆ ಸಲ್ಲಿಸುತ್ತಿದೆ. ಫಲಾವ್, ವೆಜ್ ಬಿರಿಯಾನಿ, ಎಗ್ ಬಿರಿಯಾನಿ, ಪುಳಿಯೊಗರೆ ಹೀಗೆ ದಿನಾಲೂ ಒಂದೊಂದು ರೀತಿಯ ಆಹಾರವನ್ನು ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಸಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿತ್ಯ ವಿತರಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಯುವಕರು, ಬಡವ- ಶ್ರೀಮಂತ ಎನ್ನುವ ಬೇಧಭಾವವಿಲ್ಲದೇ ಎಲ್ಲಾ ವರ್ಗದ ಜನ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ಆಸ್ಪತ್ರೆ ಇನ್ನಿತರ ತುರ್ತು ಕಾರ್ಯಗಳಿಗೆ ಆಗಮಿಸಿದ ಜನರಿಗೆ ದುಡ್ಡು ಕೊಟ್ಟರೂ ಆಹಾರ ಸಿಗುತ್ತಿಲ್ಲ. ಲಾರಿ ಚಾಲಕರು ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಸಾಕಷ್ಟು ಜನ ಹಸಿವಿನಿಂದ ಬಳಲುವಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗೆಳೆಯರ ಬಳಗ ಐದು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲು ನಿಶ್ಚಯಿಸಿದ್ದೇವೆ ಎಂದು ತಿಳಿಸಿದರು.
Advertisement
ಕೋವಿಡ್ ಸಂಕಷ್ಟದಲ್ಲಿ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಯುವ ಬಳಗದಿಂದ ಅನ್ನಸಂತರ್ಪಣೆ
04:36 PM May 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.