Advertisement

ಒಂದು ದಿನಕ್ಕೆ ಕ್ರೀಡಾ ಅಧಿಕಾರಿಗಳಾದ ಉಭಯ ಜಿಲ್ಲೆಯ ವಿದ್ಯಾರ್ಥಿಗಳು

09:18 AM Oct 13, 2022 | Team Udayavani |

ಮಂಗಳೂರು/ಉಡುಪಿ : ಯೇನಪೊಯ ಕಾಲೇಜಿನ ತೃತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಧನ್ಯಶ್ರೀ ಡಿ. ಭಟ್‌ ಮತ್ತು ಉಡುಪಿ ಅಜ್ಜರಕಾಡಿನ ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರಿಶೆಲ್‌ ಡಿ’ಮೆಲ್ಲೊ ಅವರು ತಮ್ಮ ಜಿಲ್ಲೆಯ ಯುವಜನ ಕ್ರೀಡಾ ಇಲಾಖೆಯಲ್ಲಿ ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

Advertisement

ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಹಿನ್ನೆಲೆಯಲ್ಲಿ ಒಂದು ದಿನ ಕ್ರೀಡಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ 18ರಿಂದ 23 ವಯೋಮಾನದ ಒಳಗಿನ ಯುವತಿಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಯುವತಿಯರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಧನ್ಯಶ್ರೀ ಡಿ. ಭಟ್‌ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ್‌ ಅವರೊಂದಿಗೆ ಕಾರ್ಯನಿರ್ವಹಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ, ಹೊರಾಂಗಣ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ವಸತಿ ನಿಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಕಚೇರಿಯ ಕೆಲಸ ನಿರ್ವಹಣೆ, ಇಲಾಖೆಯ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಆಯೋಜನೆ, ಕ್ರೀಡಾ ತರಬೇತಿ, ಕ್ರೀಡಾಂಗಣದ ನಿರ್ವಹಣೆ, ಕಡತಗಳ ನಿರ್ವಹಣೆಯ ಬಗ್ಗೆ ವಿವರಣೆ ಪಡೆದುಕೊಂಡರು. ಸಂಜೆ ಕಚೇರಿಯ ಕೆಲಸದ ನಿಮಿತ್ತ ಜಿ.ಪಂ. ಸಿಇಒರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಿಇಒ ಶುಭಕೋರಿದರು.

ಧನ್ಯಶ್ರೀ ಮಾತನಾಡಿ, ಒಂದು ದಿನದಲ್ಲಿ ಹಲವಾರ ಹೊಸ ವಿಷಯ ಕಲಿತಿದ್ದೇನೆ ಎಂದರು.

ಉಡುಪಿ: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಂದರ್ಭ ಕ್ರೀಡಾಧಿಕಾರಿ ಜತೆಗೆ ಒಂದು ದಿನ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲೂ ಬುಧವಾರ ನಡೆಯಿತು.

Advertisement

ಸ್ವಯಂ ಉದ್ಯೋಗದೊಂದಿಗೆ ಉಡುಪಿಯ ಅಜ್ಜರಕಾಡಿನ ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ರಿಶೆಲ್‌ ಡಿ’ಮೆಲ್ಲೊ ಅ. 11ರಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಅವರೊಂದಿಗೆ ಇದ್ದು, ಅವರ ಕಾರ್ಯವೈಖರಿಯನ್ನು ಗಮನಿಸಿದರು.

ಇದನ್ನೂ ಓದಿ : ಪಶುಸಂಗೋಪನ ಇಲಾಖೆ; ವೈದ್ಯಾಧಿಕಾರಿ ಸಹಿತ ಬಹುತೇಕ ಹುದ್ದೆ ಖಾಲಿ!

Advertisement

Udayavani is now on Telegram. Click here to join our channel and stay updated with the latest news.

Next