ಸಿಗರೇಟ್ ಸೇದುತ್ತಿರುವ ಯುವಕರ ಪೈಕಿ ಹಲವಾರು ಮಂದಿ ಗಾಂಜಾ ವ್ಯಸನಿಗಳು ಕೂಡ ಆಗಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಗಾಂಜಾ ನಶೆಗಾಗಿಯೇ ಹೆಚ್ಚಿನ ಯುವಕರು ಸಿಗ ರೇಟ್ ಸೇದುತ್ತಿರುವುದು ಕಂಡುಬಂದಿದೆ. ಒಂದು ತಿಂಗಳಿನಲ್ಲಿ ಮಂ ಗಳೂರು ಪೊಲೀಸರು ವಿವಿಧೆಡೆ ಸಿಗರೇಟ್ ಸೇದುತ್ತಿದ್ದ ಯುವಕರನ್ನು ವಿಚಾರಿಸಿ ಅನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಅದರಲ್ಲಿ ಬಹುತೇಕ ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
Advertisement
ಮಂಗಳೂರು ನಗರ, ಉಳ್ಳಾಲ, ಕೊಣಾಜೆ ಸೇರಿದಂತೆ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧೆಡೆ ನಡೆಸಿರುವ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಜ. 22ರಿಂದ ಫೆ. 20ರ ವರೆಗೆ ಒಂದು ತಿಂಗಳ ಅವಧಿಯಲ್ಲಿ 26 ಮಂದಿ ಗಾಂಜಾ ವ್ಯಸನಿಗಳನ್ನು ಬಂಧಿಸಲಾಗಿದೆ. ಬಂ ಧಿತರೆಲ್ಲರೂ 20 ರಿಂದ 30 ವರ್ಷ ವಯೋ ಮಾನದವರು.
Related Articles
ಮಂಗಳೂರಿಗೆ ಕೇರಳದಿಂದ ಅತ್ಯಧಿಕ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತುಗಳು ಪೂರೈ ಕೆಯಾಗುತ್ತಿರುವುದನ್ನು ಪೊಲೀಸರು ಈಗಾಗಲೇ ಕಂಡುಕೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೆರಡು ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿವೆ. ಫೆ. 15ರಂದು ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಊರುಮನೆ ಕ್ರಾಸ್‌ನಲ್ಲಿ ಮೂವರನ್ನು ಬಂಧಿಸಿ 1.340 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಫೆ. 16ರಂದು ಕೇರಳದ ಕುಂಜತ್ತೂರು ಪರಿಸರದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ 2.220 ಕೆಜಿ ಗಾಂಜಾವನ್ನು ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಲಾಗಿತ್ತು.
Advertisement
ಸಿಗರೇಟ್ ಸಿಗುವಲ್ಲೇ ಗಾಂಜಾ ಲಭ್ಯ ?!ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುವಂತಿಲ್ಲ. ಆದಾಗ್ಯೂ ಬಸ್ ನಿಲ್ದಾಣ, ಮೈದಾನ, ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೆ ಸಿಗರೇಟ್ ಸೇವನೆ ನಡೆಯುತ್ತಿದೆ. ಜಿಲ್ಲಾ ತಂಬಾಕು ನಿಯಂತ್ರಣ ಘಟಕ “ಕೋಟಾ³’ ತಂಡ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ಸ್ಮಗ್ಲಿಂಗ್ ಮಾಡಿರುವ ಸಿಗರೇಟ್ ಪ್ಯಾಕೇಟ್‌ಗಳು ಕೂಡ ಪತ್ತೆಯಾಗಿವೆ. ನಿರ್ದಿಷ್ಟ ನಿಯಮ ಪಾಲನೆ ಮಾಡದೆ, ತೆರಿಗೆ ಪಾವತಿಸದೆ ಕೆಲವು ಕಂಪೆನಿಗಳು ಸಿಗರೇಟ್ ಪೂರೈಕೆ ಮಾಡುತ್ತಿದ್ದು, ಇದು ಕಡಿಮೆ ಬೆಲೆಗೆ ವಿದ್ಯಾರ್ಥಿಗಳು ಸಹಿತ ಯುವಕರ ಕೈಗೆ ಸಿಗುತ್ತಿದೆ. ನಿಯಮಬಾಹಿರವಾಗಿ ಸಿಗರೇಟ್ ಮಾರಾಟ ಮಾಡುವ ಅಂಗ ಡಿಗಳಿಗೆ ಗಾಂಜಾ ಕೂಡ ಸುಲಭವಾಗಿ ಪೂರೈಕೆಯಾಗುತ್ತವೆ ಎನ್ನಲಾಗುತ್ತಿದೆ.