Advertisement
ಅವರು ಗುರುವಾರ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಶ್ರೀ ಸಂಸ್ಥಾನದ ಎಲ್ಲ ಸಹಸಂಸ್ಥೆಗಳ ವತಿಯಿಂದ ನಡೆದ ಶ್ರೀಗಳವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯಲ್ಲಿ ಗ್ರಾಮಾಭ್ಯುದಯ ಕೃತಿ ಬಿಡುಗಡೆಗೊಳಿಸಿ ಜನ್ಮದಿನದ ಸಂದೇಶ ನೀಡಿದರು.ರಾಷ್ಟ್ರಕ್ಕೆ ತೊಂದರೆಯಾಗುವ ಸಮಯ ಒಗ್ಗಟ್ಟಿನಿಂದ ಎದುರಿಸಬೇಕು. ಆಯುಧಗಳಿಂದ ಸಮಸ್ಯೆಗೆ ಪರಿಹಾರ ಇರುವುದಿಲ್ಲ. ಆಧ್ಯಾತ್ಮದಿಂದ ಸಾಧ್ಯ. ಧರ್ಮ ಮತ್ತು ಅಧರ್ಮ ಯುದ್ಧದಲ್ಲಿ ಧರ್ಮಕ್ಕೆ ಜಯ ನಿಶ್ಚಿತ ಎಂದು ಹೇಳಿದರು.
ಸಾಧ್ವಿà ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಸೇವಾ ಮನೋಭಾವದ ಭಕ್ತರಿಂದ ಮಹತ್ಕಾರ್ಯವಾಗಿದೆ ಎಂದರು.
ಮಂಗಳೂರು ಅಸಿಸ್ಟೆಂಟ್ ಕಮೀಶನರ್ ಎ.ಸಿ.ರೇಣುಕಾ ಪ್ರಸಾದ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಮುಂಬಯಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ಚಂದ್ರಹಾಸ ಎಂ.ರೈ ಬೋಳ್ನಾಡುಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿದ್ದರು.
Related Articles
Advertisement
ಕುಂಡಾಜೆ, ವರ್ಕಾಡಿ, ಕಬ್ಯಾಡಿ ಘಟ ಸಮಿತಿಗಳಿಗೆ ಆದರ್ಶ ಘಟ ಸಮಿತಿ ಪ್ರಶಸ್ತಿ ನೀಡಲಾಯಿತು. ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗರೋಡಿ ಉತ್ತಮ ಕಾರ್ಯವೈಖರಿಗಾಗಿ, ವರ್ಕಾಡಿ ಮಮತಾಲಕ್ಷ್ಮೀ ಉತ್ತಮ ಸೇವಾದೀಕ್ಷಿತೆಯಾಗಿ ಬಹುಮಾನ ಪಡೆದರು. ಬಂಟ್ವಾಳ ತಾ| ಉತ್ತಮ ಚಟುವಟಿಕೆ ಹೊಂದಿರುವುದಕ್ಕಾಗಿ ಪಡೆದ ಬಹುಮಾನವನ್ನು ಸದಾಶಿವ ಅಳಿಕೆಗೆ ವಿತರಿಸಲಾಯಿತು.
ಸೇವಾಕಾರ್ಯಗಳಿಗೆ 19.90 ಲಕ್ಷ ರೂ. ವಿನಿಯೋಗ 18 ಮಕ್ಕಳಿಗೆ 29.50 ಸಾವಿರ ಪ್ರತಿಭಾ ಪುರಸ್ಕಾರ, 203 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಕೆಗೆ 4.83 ಲಕ್ಷ ರೂ ನೆರವು, ವೈದ್ಯಕೀಯ ಶುಶ್ರೂಷೆಗೆ 125 ಮಂದಿಗೆ 3.97 ಲಕ್ಷ ರೂ. ಸಹಾಯ, 35 ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ 5.89 ಲಕ್ಷ ರೂ., ನವನಿಕೇತನ ಮನೆ, ರಿಪೇರಿ ಶೌಚಾಲಯ ನಿರ್ಮಾಣಕ್ಕೆ 21 ಫಲಾನುಭವಿಗಳಿಗೆ 4.23 ಲಕ್ಷ ರೂ., ಮಂಗಳ ಕಾರ್ಯಗಳಿಗೆ 23 ಫಲಾಪೇಕ್ಷಿತರಿಗೆ 69 ಸಾವಿರ ರೂ. – ಹೀಗೆ ಒಟ್ಟು 19.90 ಲಕ್ಷ ರೂ.ಗಳನ್ನು ವಿತರಿಸಲಾಯಿತು. ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್ ಸ್ವಾಗತಿಸಿದರು. ಸಂಚಾಲಕ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಬಂಟ್ವಾಳ ತಾ| ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ವರದಿ ಮಂಡಿಸಿದರು. ಶ್ರೀ ಗುರುದೇವ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಜಯಪ್ರಕಾಶ್ ಶೆಟ್ಟಿ ವಂದಿಸಿದರು. ನವೀನ್ ಶೆಟ್ಟಿ ಮಂಗಳೂರು, ಸುರೇಶ್ ಶೆಟ್ಟಿ ಮೊಗರೋಡಿ, ಯಶೋಧರ ಸಾಲ್ಯಾನ್ ಬೆಳ್ತಂಗಡಿ, ವ್ಯವಸ್ಥಾಪಕ ಪದ್ಮನಾಭ ಒಡಿಯೂರು ವಿವಿಧ ಪಟ್ಟಿ ಓದಿದರು.