ಬೆಳ್ತಂಗಡಿ: ಕಮ್ಯೂನಿಸ್ಟ್ ವಿಚಾರಧಾರೆಯ ಬುದ್ಧಿಜೀವಿಗಳು ಯುವ ಸಮುದಾಯವನ್ನು ಮಾನಸಿಕ ವಾಗಿ ಭ್ರಷ್ಟರನ್ನಾಗಿಸುತ್ತಿದ್ದಾರೆ. ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರಿ ಹೇಳಿದ್ದಾರೆ.
ರವಿವಾರ ಬೆಳ್ತಂಗಡಿಯ ಶ್ರೀ ಮಂಜುನಾಥ ಕಲಾಭವನದಲ್ಲಿ ನಡೆದ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗಗಳ ಅಭ್ಯಾಸ ವರ್ಗದಲ್ಲಿ “ಭಾರತದ ವರ್ತ ಮಾನ ಪರಿಸ್ಥಿತಿ’ ಎಂಬ ವಿಚಾರದಲ್ಲಿ ಅವರು ಅವಲೋಕನ ಭಾಷಣ ಮಾಡಿದರು.
ಚೀನ ನೀತಿಯ ಬಗ್ಗೆ ವಿಶ್ಲೇಷಿಸಿದ ಅವರು, ಚೀನವೇ ನಮ್ಮ ನಿಜವಾದ ವೈರಿ ಎಂದು 2004ರಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಹೇಳಿದ್ದರು. ಅವರ ಮಾತು ಇಂದು ನಿಜವಾಗುತ್ತಿದೆ. ಆ ಸಂದರ್ಭ ಅವರ ವಿರುದ್ಧ ಕಮ್ಯೂನಿಸ್ಟರು ಜೋರಾಗಿ ಕೂಗಾಡಿದ್ದರಲ್ಲದೆ ಅವರಿಗೆ ಅರುಳು ಮರಳು ಎಂದಿದ್ದರು. ಚೀನದ ವಿಸ್ತಾರವಾದ ನೀತಿಯನ್ನು ಮಿಲಿಟರಿ ಮುಖಾಂತರ ಎದುರಿಸಲು ಭಾರತ ಸರ್ವಶಕ್ತವಾಗಿದೆ ಎಂದ ರು.
ಗ್ಯಾಟ್ ಒಪ್ಪಂದದಿಂದಾಗಿ ಯಾವುದೇ ಸರಕಾರ ಚೀನ ಉತ್ಪನ್ನಗಳನ್ನು ನಿರ್ಬಂ ಧಿಸಲು ಸಾಧ್ಯವಿಲ್ಲ. ಆದರೆ ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುವ ಚೀನ ಉತ್ಪನ್ನಗಳನ್ನು ನಾವು ದೂರ ಮಾಡುವ ಮೂಲಕ ಚೀನಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯವಿದೆ ಎಂದು ಹೇಳಿದರು.
ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂತ ಮತ್ತು ವರ್ತ ಮಾನದ ಇತಿಹಾಸದಿಂದ ಪಾಠಕಲಿತು ಭವಿಷ್ಯವನ್ನು ನಿರ್ಮಿಸುವ ಕಾರ್ಯ ಆಗಬೇಕಾಗಿದೆ. ಬೌದ್ಧಿಕ ಮತ್ತು ಆರ್ಥಿಕವಾಗಿ ಸರ್ವಶಕ್ತವಾದ ದೇಶ ಜಗತ್ತನ್ನೇ ಹತೋಟಿಯಲ್ಲಿಡ ಬಹು ದಾಗಿದೆ. ಮಾನವ ಸಂಪನ್ಮೂಲ ಅಗಾಧ ವಾಗಿರುವ ನಮ್ಮ ದೇಶದಲ್ಲಿ ಆಂತರಿಕ ಮೌಲ್ಯವನ್ನು ಗುರುತಿಸಿಕೊಂಡು ಮುನ್ನಡೆ ಯಬೇಕಾಗಿದೆ ಎಂದರು.ಪರಿಷತ್ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ಸ್ವಾಗತಿಸಿ, ಪ್ರಸ್ತಾವಿಸಿದರು.
ಬೆಳ್ತಂಗಡಿ ನಗರ ಕಾರ್ಯದರ್ಶಿ ಸುಮಂತ್ ವಂದಿಸಿದರು. ವಿಭಾಗ ಕಾರ್ಯಾಲಯ ಪ್ರಮುಖ್ ಶೀತಲ್ ಕಾರ್ಯಕ್ರಮ ನಿರ್ವಹಿಸಿದರು.