Advertisement
ಎರಡು ಸುತ್ತುಗಳಲ್ಲಿ ಸ್ಪರ್ಧೆಆ್ಯತ್ಲೆಟಿಕ್ಸ್ನ ಎಲ್ಲ ಸ್ಪರ್ಧೆಗಳು (4 ಕಿ.ಮೀ. ಕ್ರಾಸ್ ಕಂಟ್ರಿ ಹೊರತು ಪಡಿಸಿ) ಎರಡು ಸುತ್ತುಗಳಲ್ಲಿ ನಡೆಯಲಿವೆ. ಎರಡೂ ಸುತ್ತುಗಳ ಫಲಿತಾಂಶ ಪರಿಶೀಲಿಸಿ ವಿಜೇತರ ಪಟ್ಟಿ ಪ್ರಕಟಿಸಲಾಗುತ್ತದೆ. 17ರ ಹರೆಯದ ಪನ್ವಾರ್ ಮೊದಲ ಸುತ್ತಿನಲ್ಲಿ 20:23.30ಸೆ.ನಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದಿದ್ದರು. ಇಕ್ವಾಡೋರ್‌ನ ಪಾಟಿನ್ ಆಸ್ಕರ್ ಮೊದಲ ಸ್ಥಾನ (20:13.69 ಸೆ.) ಪಡೆದಿದ್ದರು. ಆಸ್ಕರ್ ದ್ವಿತೀಯ ಸುತ್ತಿನಲ್ಲಿ ದ್ವಿತೀಯ ಸ್ಥಾನ (20:38.17 ಸೆ. ) ಪಡೆದರೂ ಒಟ್ಟಾರೆ ನಿರ್ವಹಣೆಯ ಆಧಾರದಲ್ಲಿ ಚಿನ್ನ ಗೆದ್ದರು.ಪನ್ವಾರ್ 2 ಸುತ್ತುಗಳ ಹೋರಾಟ ದಲ್ಲಿ ಒಟ್ಟು 40:59.17 ಸೆ. ತೆಗೆದುಕೊಂಡಿದ್ದರು. ಇದು ಆಸ್ಕರ್ ತೆಗೆದುಕೊಂಡ ಸಮಯಕ್ಕಿಂತ (40:51.86 ಸೆ.) 7 ನಿಮಿಷ ಹೆಚ್ಚು. ಹಾಗಾಗಿ ಪನ್ವಾರ್ ಬೆಳ್ಳಿ ಪಡೆದರೆ ಪ್ಯೂರ್ಟೊರಿಕೊದ ಜಾನ್ ಮೊರೆಯು ಕಂಚು ಗೆದ್ದರು.
ಇದೊಂದು ಶ್ರೇಷ್ಠ ಅನುಭವ. ಪದಕ ಗೆದ್ದಿರುವುದಕ್ಕೆ ಸಂತೋಷವಾಗುತ್ತಿದೆ. ಗೇಮ್ಸ್‌ಗಾಗಿ ಕಠಿನ ಅಭ್ಯಾಸ ನಡೆಸಿದ್ದೆ. ಇದು ನನ್ನ ಪಾಲಿನ ಮೊದಲ ಪದಕವಾಗಿದೆ. ನನ್ನ ಮುಂದಿನ ಗೋಲು ಸೀನಿಯರ್ ಮಟ್ಟದಲ್ಲೂ ಇನ್ನಷು ಉತ್ತಮ ಸಾಧನೆ ಗೈದು ಪದಕ ಗೆಲ್ಲಲು ಪ್ರಯತ್ನಿಸುವುದು ಆಗಿದೆ.
ಸೂರಜ್ ಪನ್ವಾರ್