Advertisement

ಯುವಜನತೆಯ ಮಾರ್ಗದರ್ಶನಕ್ಕೆಯುವ ನೀತಿ: ಡಾ|ರಾಜೇಂದ್ರ ಕೆ.ವಿ.

01:53 AM Jun 05, 2022 | Team Udayavani |

ಮಂಗಳೂರು: ಯುವ ಜನತೆ ದೇಶದ ಆಸ್ತಿ. ಅವರಿಗೆ ಸೂಕ್ತ ಸಮಯ ದಲ್ಲಿ ಸರಿಯಾದ ಮಾರ್ಗದರ್ಶನ ದೊರೆಯು ವುದು ಅಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಯುವ ನೀತಿ- 2021ರ ಜಾರಿ ಮುಖ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಯುವ ನೀತಿ- 2021ರ ಕುರಿತು ಅಭಿಪ್ರಾಯ ಸಂಗ್ರಹಕ್ಕಾಗಿ ಶನಿವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ನೀತಿ- 2021 ರಾಜ್ಯದ ಬೆಳವಣಿಗೆಯ ದಿಕ್ಕನ್ನು ನಿರ್ಧರಿಸಬಲ್ಲುದು. ಇದರ ಯಶಸ್ಸಿಗೆ ಎಲ್ಲರ ಸಲಹೆ, ಮಾರ್ಗದರ್ಶನ ಅಗತ್ಯ ಎಂದರು.

ಪರಿಣಾಮಕಾರಿ ಜಾರಿ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ| ಕುಮಾರ್‌ ಮಾತನಾಡಿ, ಯುವನೀತಿಯ ಪ್ರಾಮುಖ್ಯ, ವ್ಯಾಪಕತೆಯನ್ನು ನಾವು ಅರಿತುಕೊಳ್ಳಬೇಕು. ಈ ಕಾರ್ಯ ನೀತಿ ಯನ್ನು ನಿರ್ದಿಷ್ಟ ಗುರಿಯೊಂದಿಗೆ, ಒಂದು ಚೌಕಟ್ಟಿನೊಳಗೆ ಜಾರಿಗೆ ತಂದರೆ ಪರಿಣಾಮ ಕಾರಿಯಾಗಲು ಸಾಧ್ಯ ಎಂದರು.

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ರಮೇಶ್‌ ವೆಂಕಟರಾಮ್‌ ಮಾತನಾಡಿ, ಯುವಜನತೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರದ ಸೂಚನೆಯಂತೆ ಯೋಜನೆ ರೂಪಿಸಲಾಗಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಯುನಿಸೆಫ್‌ ಮಕ್ಕಳ ಸಂರಕ್ಷಣಾ ಯೋಜನೆ (ಕೊಪ್ಪಳ)ಯ ಹರೀಶ್‌ ಜೋಗಿ ವೇದಿಕೆಯಲ್ಲಿದ್ದರು.

Advertisement

ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು, ಎನ್ನೆಸ್ಸೆಸ್‌ ಅಧಿಕಾರಿಗಳು- ವಿದ್ಯಾರ್ಥಿಗಳು ಹಾಗೂ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರತಿನಿಧಿಗಳನ್ನು 6 ತಂಡಗಳಾಗಿ ವಿಂಗಡಿಸಿ, ಯೋಜನೆಯ 6 ಗಮನ ಕೇಂದ್ರೀಕೃತ ಕ್ಷೇತ್ರಗಳ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next