Advertisement

ಸತ್ಯಸಾಯಿ ಗ್ರಾಮದಲ್ಲಿ ಐದು ದಿನಗಳ ಜಾಗತಿಕ ಯುವ ಸಮಾವೇಶ

12:29 PM Nov 19, 2019 | keerthan |

ಚಿಕ್ಕಬಳ್ಳಾಪುರ:  ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಪ್ರೇಮಾಮೃತ ಸಭಾಂಗಣದಲ್ಲಿ ಮಂಗಳವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರ 94 ನೇ ಹುಟ್ಟು ಹಬ್ಬದ ಪ್ರಯುಕ್ತ ಸಮಾವೇಶಗೊಂಡಿವ ಐದು ದಿನಗಳ ಜಾಗತಿಕ ಯುವ ಸಮಾವೇಶಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿ ಚಾಲನೆ ನೀಡಿದರು.

Advertisement

ಸೇವಕತ್ವದಿಂದ ನಾಯಕತ್ವದಡೆಗೆ ಎಂಬ ಘೋಷಣೆಯಡಿ ಆಯೋಜಿಸಿರುವ ಯುವ ಸಮಾವೇಶದಲ್ಲಿ ಜಗತ್ತಿನ 32 ಕ್ಕೂ ಹೆಚ್ವು ರಾಷ್ಟ್ರಗಳಿಂದ 2000 ಕ್ಕೂ ಅಧಿಕ ಸಂಖ್ಯೆಯಲ್ಲಿ ಯುವಕ, ಯುವತಿಯರು ಪಾಲ್ಗೊಂಡಿದ್ದು ಇಡೀ ಪ್ರೇಮಾಮೃತಮ್ ಸಭಾಂಗಣದಲ್ಲಿ ಸಾಯಿಬಾಬಾ ಭಕ್ತರು ಕಿಕ್ಕಿರಿದು ತುಂಬಿದ್ದಾರೆ.

ಭಾವೈಕ್ಯ ಮೆರೆದ ಸಮ್ಮೇಳನ
ಸತ್ಯಸಾಯಿ ಗ್ರಾಮದಲ್ಲಿ ಆರಂಭಗೊಂಡಿರುವ ಜಾಗತಿಕ ಯುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಷ್ಟ್ರಗಳ ಶ್ವೇತಪಾತಕೆಗಳನ್ನು ಹಿಡಿದು ಸಾಯಿ ಭಕ್ತರು ಮೆರವಣಿಗೆ ನಡೆಸಿ ಭಾವೈಕ್ಯತೆ ಮೆರೆದರು. ಆರಂಭದಲ್ಲಿ ಸರ್ವಧರ್ಮಗಳ ಪ್ರಾರ್ಥನೆ ಸಲ್ಲಿಸಲಾಯಿತು.

ಅಮೇರಿಕಾ ಆಸ್ಟ್ರೇಲಿಯಾ, ಜಪಾನ್, ಸಿಂಗಪುರ್, ನೇಪಾಳ್ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸಾಯಿ ಭಕ್ತರು ಭಾಗವಹಿಸಿದ್ದಾರೆ. ವಿದೇಶಿ ಮಹಿಳೆಯರು ದೇಶದ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು.

Advertisement

ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಸದ್ಗುರು ಶ್ರೀ ಸಾಯಿ ಮಧುಸೂದನ್ ವಹಿಸಿದ್ದು, ವೇದಿಕೆಯಲ್ಲಿ ಬನರಾಸದ ಹಿಂದೂ ವಿಶ್ವವಿದ್ಯಾಲಯ ರಾಕೇಶ್ ಉಪಾಧ್ಯಾಯ, ಅಮೇರಿಕಾ ಖ್ಯಾತ ಉದ್ಯಮಿ ಐಸಾಕ್, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್. ನರಸಿಂಹಮೂರ್ತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾಯಿ ಬಾಬಾ ಭಕ್ತರು ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next