Advertisement

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಗೆ ಎರಡನೇ ಬಲಿ

10:56 PM Jun 30, 2020 | Hari Prasad |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ 19 ಮಹಾಮಾರಿಗೆ ಎರಡನೇ ಬಲಿಯಾಗಿದೆ.

Advertisement

ಇದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಸೋಮವಾರ ಮೃತಪಟ್ಟಿದ್ದ 32 ವರ್ಷದ ಅಥಣಿ ತಾಲೂಕಿನ ಯುವಕನಲ್ಲಿ ಕೋವಿಡ್ ಸೋಂಕು ಇದ್ದಿದ್ದು ಇಂದು ದೃಢಪಟ್ಟಿದೆ.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ 32 ವರ್ಷದ ಯುವಕ ತೀವ್ರ ಉಸಿರಾಟದ ತೊಂದರೆಯಿಂದ ಬಲಲುತ್ತಿದ್ದರು.

ಕೂಡಲೇ ಆ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿದ್ದುದರಿಂದ ಆ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಜಿಲ್ಲಾಸ್ಪತ್ರೆಗೆ ದಾಖಲುಗೊಂಡಿದ್ದ ಆ ಯುವಕ ಸೋಮವಾರ ಮೃತಪಟ್ಟಿದ್ದ.

Advertisement

ಉಸಿರಾಟ ತೊಂದರೆಯಿಂದ ಬಳಲಿ ಮೃತಪಟ್ಟಿದ್ದರಿಂದ ವೈದ್ಯರು ಯುವಕನ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಮಂಗಳವಾರ ಯುವಕನ ವರದಿ ಪಾಸಿಟಿವ್ ಬಂದಿದೆ. ಈ ಯುವಕ ಲಾಕ್ ಡೌನ್‌ ಗಿಂತ ಮುಂಚೆಯೇ ವಿದೇಶದಿಂದ ಮರಳಿದ್ದನು ಎನ್ನಲಾಗುತ್ತಿದೆ.

ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್‌ ಗೆ ತೆರಳಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಈ ಯುವಕನ ಅಜ್ಜಿ ಈ ಮೊದಲೇ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು ಮತ್ತು ಇದು ಜಿಲ್ಲೆಯಲ್ಲಿ ದಾಖಲಾಗಿದ್ದ ಕೋವಿಡ್ 19 ಸೋಂಕು ಸಂಬಂಧಿರ ಬಲಿಯಾಗಿತ್ತು.

ಇದೀಗ ಅಥಣಿಯ ಈ ಯುವಕನೂ ಮಹಾಮಾರಿಗೆ ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next