Advertisement

ಆಗಸ್ಟಾ ಮಧ್ಯವರ್ತಿ ಮಿಶೆಲ್‌ ವಕೀಲ ಯೂತ್‌ ಕಾಂಗ್ರೆಸ್‌ ಸದಸ್ಯ

07:06 PM Dec 05, 2018 | Team Udayavani |

ಹೊಸದಿಲ್ಲಿ : ಆಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದ ಮಧ್ಯವರ್ತಿಯಾಗಿ ಭಾರತಕ್ಕೆ ಗಡೀಪಾರುಗೊಂಡಿರುವ ಕ್ರಿಶ್ಚಿಯನ್‌ ಮಿಶೆಲ್‌ ಅವರನ್ನು ಕೋರ್ಟಿನಲ್ಲಿ ಪ್ರತಿನಿಧಿಸುತ್ತಿರುವ ವ್ಯಕ್ತಿ ಇಂಡಿಯನ್‌ ಯೂತ್‌ ಕಾಂಗ್ರೆಸ್‌ನ ಕಾನೂನು ವಿಭಾಗದ ಪ್ರಭಾರಿ ಆಲ್‌ಜೊ ಕೆ ಜೋಸೆಫ್ ಎನ್ನುವುದೀಗ ಬಹಿರಂಗವಾಗಿದೆ. 

Advertisement

ಇದು ಬಹಿರಂಗವಾಗುತ್ತಲೇ  ಜೋಸೆಫ್ ಅವರು ‘ನಾನು ನನ್ನ ವೃತ್ತಿಯ ನೆಲೆಯಲ್ಲಿ ಮಿಶೆಲ್‌ ಅವರನ್ನು ಕೋರ್ಟಿನಲ್ಲಿ ಪ್ರತಿನಿಧಿಸುತ್ತಿದ್ದೇನೆಯೇ ಹೊರತು ದೇಶದ ಅತ್ಯಂತ ಹಳೆಯ ಪಕ್ಷದೊಂದಿಗೆ ನನಗಿರುವ ನಂಟಿನ ಕಾರಣಕ್ಕೆ ಅಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. 

“ನಾನೊಬ್ಬ ವೃತ್ತಿ ನಿರತ ವಕೀಲ. ನಾನು ನನ್ನ ವೃತ್ತಿಯ ನೆಲೆಯಲ್ಲಿ ಮಿಶೆಲ್‌ ಅವರನ್ನು ಕೋರ್ಟಿನಲ್ಲಿ ಪ್ರತಿನಿಧಿಸುತ್ತಿದ್ದೇನೆ. ವಕೀಲನಾಗಿರುವುದರಿಂದ ಯಾವುದೇ ಕಕ್ಷಿದಾರ ನನ್ನ ಬಳಿ ಬಂದರೂ ನಾನು ಕರ್ತವ್ಯ ನಿಮಿತ್ತ ಅವರ ಕೇಸನ್ನು ಕೈಗೆತ್ತಿಕೊಳ್ಳುತ್ತೇನೆ. ನಾನು ಹೀಗೆ ಮಾಡುವುದಕ್ಕೂ ಕಾಂಗ್ರೆಸ್‌ ಪಕ್ಷದ ಸದಸ್ಯನಾಗಿರುವುದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಜೋಸೆಫ್ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next